Site icon PowerTV

ಮಂಗಳೂರಿನಲ್ಲಿ ಅನಧಿಕೃತವಾಗಿ ಟಿಪ್ಪು ಕಟೌಟ್ ಅಳವಡಿಕೆ

ಮಂಗಳೂರು : ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಮುನ್ನಲೆಗೆ ಬಂದಿದ್ದು, ‌ ಮಂಗಳೂರಿನಲ್ಲಿ ಇದೀಗ ಟಿಪ್ಪು ಕಟೌಟ್‌ ವಿವಾದ ಎಬ್ಬಿಸಿದೆ. DYFI ಕಾರ್ಯಕರ್ತರು ಅಳವಡಿಸಿರುವ ಟಿಪ್ಪು ಸುಲ್ತಾನನ ಕಟೌಟ್ ತೆರವಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಹರೇಕಳದಲ್ಲಿ ಟಿಪ್ಪು ಕಟೌಟ್ ಹಾಕಲಾಗಿತ್ತು. ಫೆಬ್ರವರಿ 27ರಂದು ನಡೆಯಲಿರುವ ಡಿವೈಎಫ್ಐ 17ನೇ ರಾಜ್ಯ ಸಮ್ಮೇಳನದ ಪ್ರಯುಕ್ತ DYFI ಕಾರ್ಯಕರ್ತರು ಟಿಪ್ಪು ಕಟೌಟ್ ಹಾಕಿದ್ದರು. ಕಟೌಟ್ ಹಾಕುವಾಗ ಪೊಲೀಸ್ ಅನುಮತಿ ಪಡೆದಿರಲಿಲ್ಲ.

ಈ ಹಿನ್ನೆಲೆಯಲ್ಲಿ ಕಟೌಟ್ ತೆರವು ಮಾಡುವಂತೆ ಕೊಣಾಜೆ ಠಾಣಾಧಿಕಾರಿ DYFI ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಆದರೆ, ತಾವು ಟಿಪ್ಪು ಪ್ರತಿಮೆ ತೆಗೆಯುವುದಿಲ್ಲ ಎಂದು ಡಿವೈಎಫ್‌ಐ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಅನಧಿಕೃತವಾಗಿ ಹಾಕಿರುವ ಟಿಪ್ಪು ಕಟೌಟ್‌ ತೆಗೆಯದಿದ್ದರೆ ತಾವು ಪ್ರತಿಭಟನೆಗೆ ಇಳಿಯುವುದಾಗಿ ಹಿಂದೂ ಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

Exit mobile version