Site icon PowerTV

ಪಾರ್ಟಿ ಮಾಡಿ ಸ್ನೇಹಿತನಿಗೆ ಚಟ್ಟ ಕಟ್ಟಿದ ಪಾಪಿ

ಬೆಳಗಾವಿ : ಸ್ನೇಹಿತನ‌ ಜತೆ ಹೊರ ಹೋದವನು ತೋಟದ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಎಣ್ಣೆ ಪಾರ್ಟಿ ಮಾಡಿ, ಮಂಜುನಾಥ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಸ್ನೇಹಿತ ಪ್ರದೀಪ ಪರಾರಿಯಾಗಿದ್ದಾನೆ. ಮಂಜುನಾಥ ಕೋಲಕಾರ (25) ಕೊಲೆಯಾದ ಸ್ನೇಹಿತ.

ಇದೇ ತಿಂಗಳ 16 ರಂದು ಹೊಸುರು ಗ್ರಾಮದಲ್ಲಿ ಮಂಜುನಾಥ ಕೊಲೆ ನಡೆದಿದೆ. ಕೊಲೆಯಾಗುವ ಮುನ್ನ ಪ್ರದೀಪ ಎಂಬ ಯುವಕನ ಜತೆ ಮೃತ ಮಂಜುನಾಥ ತಿರುಗಾಡುತ್ತಿದ್ದ. ಕೊಲೆಯಾದ ದಿನದಿಂದ ಈವರಗೂ ಪ್ರದೀಪ ಸುಳಿವು ಯಾರಿಗೂ ಸಿಕ್ಕಿಲ್ಲ.

ಸುದ್ದಿ ಓದಿದ್ದೀರಾ? : ಮದುವೆ ಮುಗಿಸಿ ಮನೆಗೆ ಹಿಂದಿರುಗುವಾಗ ಮಸಣ ಸೇರಿದ ಯುವಕ

ಆರೋಪಿಗಾಗಿ ಖಾಕಿ ಹುಡುಕಾಟ

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಆರೋಪಿ ಪ್ರದೀಪಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆರೋಪಿ ಪತ್ತೆ ಬಳಿಕ ಕೊಲೆಗೆ ನಿಖರ ಸತ್ಯಾಂಶ ತಿಳಿದುಬರಲಿದೆ.

Exit mobile version