Site icon PowerTV

ಡಿಎಂಕೆ ಜೊತೆ ಮೈತ್ರಿಗೆ ಮುಂದಾದ ನಟ ಕಮಲ್​ ಹಾಸನ್​ !

ಚನ್ನೈ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತಮಿಳುನಾಡಿನಲ್ಲಿ ರಾಜಕೀಯ ಷಟುವಟಿಕೆಳು ಗರಿಗೆದರಿದ್ದು ಮೈತ್ರಿ, ಕ್ಷೇತ್ರ ಹಂಚಿಕೆ ಸಂಬಂಧ ಆಡಳಿತ ಪಕ್ಷತೊಂದಿಗೆ ಮತ್ತೊಂದು ಪ್ರಮುಖ ಪಕ್ಷ ಮಾತುಕತೆ ಆರಂಭಿಸಿದೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮತ್ತು ನಟ-ರಾಜಕಾರಣಿ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ವಿಲೀನಗೊಳ್ಳುವ ಸಾಧ್ಯತೆಯಿದೆ. ಎರಡೂ ಪಕ್ಷಗಳಲ್ಲಿ ಸೀಟು ಹಂಚಿಕೆ ಕುರಿತು ಅಂತಿಮ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರನ್ನು ಭೇಟಿ ಮಾಡಿದ ಬಿಜೆಪಿ ಶಾಸಕ ಗೋಪಾಲಯ್ಯ!

ಇಂದಿನಿಂದ ತಮಿಳುನಾಡಿನ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯಲಿದ್ದು ಅಧಿವೇಶನದ ನಂತರ ಕಮಲ್ ಹಾಸನ್ ಮತ್ತು ಡಿಎಂಕೆ ನಾಯಕರ ನಡುವೆ ಸಭೆ ನಡೆಸಲು ಯೋಜಿಸಲಾಗಿದೆ. ಎಂಎನ್ ಎಂಗೆ ಒಂದು ಸ್ಥಾನ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಮಲ್ ಹಾಸನ್ ಅವರೇ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕಮಲ್ ಹಾಸನ್, “ಥಗ್ ಲೈಫ್ ಚಿತ್ರದ ಪ್ರಚಾರಕ್ಕಾಗಿ ಅಮೆರಿಕಕ್ಕೆ ಹೋಗಿದ್ದೆ, ಆ ಕೆಲಸಗಳನ್ನು ಮುಗಿಸಿ ಈಗ ವಾಪಸ್ಸಾಗುತ್ತಿದ್ದೇನೆ, ಇನ್ನೆರಡು ದಿನದಲ್ಲಿ ಶುಭ ಸುದ್ದಿಯೊಂದಿಗೆ ನಿಮ್ಮನ್ನು ಭೇಟಿ ಮಾಡುತ್ತೇನೆ. ನಾನು ಯಾವುದೇ ಸುದ್ದಿ ತಂದಿಲ್ಲ ಉಳಿದವರೆಲ್ಲರ ಜೊತೆ ಸಮಾಲೋಚಿಸಿ ಎರಡು ದಿನದಲ್ಲಿ ಭೇಟಿಯಾಗಿ ಈ ಬಗ್ಗೆ ವಿವರಿಸುತ್ತೇನೆ” ಎಂದು ತಿಳಿಸಿದ್ದಾರೆ.

Exit mobile version