Site icon PowerTV

ನಿಮ್ಮ ಪ್ರೀತಿ-ಅಭಿಮಾನಕ್ಕೆ ಬೆಲೆ ಕಟ್ಟಲು ಆಗಲ್ಲ, ‘ಧನ್ಯೋಸ್ಮಿ ಕರ್ನಾಟಕ’ : ನಟ ದರ್ಶನ್

ಬೆಂಗಳೂರು : ಹುಟ್ಟುಹಬ್ಬದಂದು ಶುಭಾಶಯ ಕೋರಿದ ತಮ್ಮ ಪ್ರೀತಿಯ ಸೆಲೆಬ್ರೆಟಿಗಳಿಗೆ, ಚಿತ್ರರಂಗದ ಗಣ್ಯರಿಗೆ, ರಾಜಕಾರಣಿಗಳಿಗೆ ಸೇರಿದಂತೆ ಕರ್ನಾಟಕ ಜನತೆಗೆ ನಟ ದರ್ಶನ್ ಧನ್ಯವಾದ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಡಿ ಬಾಸ್, ನನ್ನ ಪ್ರೀತಿಯ ಕೋರಿಕೆಗೆ ಬೆಲೆಕೊಟ್ಟು ಶಾಂತ ರೀತಿಯಲ್ಲಿ ಹುಟ್ಟುಹಬ್ಬದ ಆಚರಣೆಗೆ ಸಹಕರಿಸಿದ ಅಭಿಮಾನಿ ವರ್ಗಕ್ಕೆ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು ಎಂದು ಹೇಳಿದ್ದಾರೆ.

ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳು ತಿಳಿಸಿದ ಪ್ರಿಯ ಬಂಧು-ಮಿತ್ರರು, ಚಿತ್ರರಂಗದ ಸ್ನೇಹಿತರು, ಎಲ್ಲಾ ಮಾಧ್ಯಮ ಮಿತ್ರರು, ರಾಜಕೀಯ ಗಣ್ಯರು, ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಅನಂತ ಅನಂತ ವಂದನೆಗಳು ಎಂದು ಧನ್ಯವಾದ ತಿಳಿಸಿದ್ದಾರೆ.

ಇನ್ನೂ ಹುಟ್ಟುಹಬ್ಬದ ಪ್ರಯುಕ್ತ ಅನೇಕ ಅನಾಥಾಶ್ರಮ ಹಾಗೂ ವೃದ್ದಾಶ್ರಮಗಳಲ್ಲಿ ತಮ್ಮ ಕೈಲಾದ ಸೇವೆ ಮಾಡಿದ ಅಭಿಮಾನಿಗಳಿಗೆ ನನ್ನ ಅಭಿನಂದನೆಗಳು. ಈ ನಿಮ್ಮ ಪ್ರೀತಿ, ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗುವುದಿಲ್ಲ. ಧನ್ಯೋಸ್ಮಿ ಕರ್ನಾಟಕ ಎಂದು ನಟ ದರ್ಶನ್ ಪೋಸ್ಟ್​ ಮಾಡಿದ್ದಾರೆ.

ನನಗೆ ನನ್ನ ಸೆಲೆಬ್ರಿಟಿಗಳೇ ಮುಖ್ಯ

ನನಗೆ ನನ್ನ ಸೆಲೆಬ್ರೆಟಿಗಳೇ ಮುಖ್ಯ ಎಂದು ನಟ ದರ್ಶನ್ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿ ಪರ್ವ ಕಾರ್ಯಕ್ರಮದಲ್ಲಿ ಹೇಳಿದ್ದರು. ಅವಮಾನಗಳು ಆದ ಬಳಿಕ ಸನ್ಮಾನ ಕೂಡ ಸಿಗುತ್ತದೆ. ಚಪ್ಪಲಿಯಲ್ಲಿ ಹೊಡೆದರೆ ಹೊಡೆಸಿಕೊಳ್ಳೋಣ, ಹೆಮ್ಮೆಯಿಂದ ಸ್ವೀಕರಿಸೋಣ. ನಾನು ಯಾವಾಗಲೂ ಕಾಂಟ್ರವರ್ಸಿಯಲ್ಲೇ ಇರುತ್ತೇನೆ. ಐ ಆ್ಯಮ್ ಬ್ಯಾಡ್ ಬಾಯ್. ನನ್ನ ಸೆಲಿಬ್ರಿಟಿಗಳ ಬಗ್ಗೆ ಅಷ್ಟೇ ನನಗೆ ಚಿಂತೆ, ಅವರು ಮಾತ್ರ ನನಗೆ ಬೇಕು ಎಂದು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದರು.

Exit mobile version