Site icon PowerTV

ಅಕ್ರಮ ಪರ್ಫ್ಯೂಮ್ ಕಾರ್ಖಾನೆ ವಿರುದ್ದ ಕ್ರಮ: ಗೃಹಸಚಿವ ಪರಮೇಶ್ವರ

ಬೆಂಗಳೂರು: ಕುಂಬಳಗೋಡು ಪರ್ಫ್ಯೂಮ್​ ಫ್ಯಾಕ್ಟರಿಯಲ್ಲಿ ಬೆಂಕಿ‌ ಅವಘಡಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪರ್ಫ್ಯೂಮ್‌ ಗೋಡೌನ್‌ನಲ್ಲಿ ಬೆಂಕಿ; ಗಾಯಾಳುಗಳು ಸಾವು ಬದುಕಿನ ಮಧ್ಯೆ ಹೋರಾಟ

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಲೈಸನ್ಸ್ ,ಟ್ರೇಡ್ ಲೈಸನ್ಸ್, ಪರ್ಮಿಶನ್ ಪಡೆದುಕೊಳ್ಳದೇ ಕಾರ್ಖಾನೆ ನಡೆಸುತ್ತಿದ್ದಾರೆ. ಎಲ್ಲಿ ಲೋಪ ಆಗಿದೆ ಎಂದು ಪರೀಶೀಲನೆ ನಡೆಸುತ್ತಿದ್ದೇವೆ. ಅವರು ಯಾವುದೇ ಅನುಮತಿ ಪಡೆಯದೇ ಪರ್ಫೂಮ್ಯ್ ಫ್ಯಾಕ್ಟರಿ ನಡೆಸುತ್ತಿದ್ದರು, ಇದಕ್ಕೆಲ್ಲಾ ಪೂರಕ ಲೈಸನ್ಸ್ ಬೇಕು. 30-40 ಸೈಟ್‌ನಲ್ಲಿ ಯಾರಿಗೂ ಗೊತ್ತಿಲ್ಲದೇ ನಡೆಸುತ್ತಿದ್ದಾರೆ. ಬಿಬಿಎಂಪಿ, ಪೊಲೀಸ್ ಇಲಾಖೆಯಿಂದ NOC ತೆಗೆದುಕೊಂಡು ಮಾಡಬೇಕು. ಘಟನೆಯಲ್ಲಿ ಓನರ್ ಕೂಡ ಸಾವನ್ನಪ್ಪಿದ್ದಾರೆ. ಇದರ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಇನ್ನೂ ಈ ಅವಘಡದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

Exit mobile version