Site icon PowerTV

ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಮಾದಕ ನಟಿ ಸನ್ನಿ ಲಿಯೋನ್​!

ಲಖನೌ : ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿ ಪರೀಕ್ಷೆಗೆ ಸನ್ನಿ ಲಿಯೋನ್‌ ಹೆಸರಲ್ಲಿ ಅರ್ಜಿ ಹಾಕಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹೌದು, ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿಯ ಹಾಲ್‌ ಟಿಕೆಟ್‌ನಲ್ಲಿ ಸನ್ನಿ ಲಿಯೋನ್‌ ಅವರ ಫೋಟೊ ಕಾಣಿಸಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮಾದಕ ನಟಿ ಸನ್ನಿ ಲಿಯೋನ್‌ ಅವರಿಗೆ ಅಭಿಮಾನಿಗಳು ಮಾತ್ರವಲ್ಲ, ‘ಆರಾಧಕರು’ ಕೂಡ ಇದ್ದಾರೆ. ಸನ್ನಿ ಲಿಯೋನ್‌ ಅವರು ಕೂಡ ಅಷ್ಟೇ, ತಮ್ಮ ಮಾದಕತೆ ಮೂಲಕವೇ ಅಭಿಮಾನಿಗಳ ಮನರಂಜಿಸುತ್ತಾರೆ. ಇನ್ನು ಸನ್ನಿ ಲಿಯೋನ್‌ ಅವರ ಅಭಿಮಾನಿಗಳು ಕೆಲವೊಮ್ಮೆ ಚಿತ್ರ ವಿಚಿತ್ರವಾಗಿ ಅಭಿಮಾನ ಪ್ರದರ್ಶಿಸುತ್ತಾರೆ. ಇದಕ್ಕೆ ಸಾಕ್ಷಿ ಈ ಘಟನೆ.

ಇದನ್ನೂ ಓದಿ: ವೀರಶೈವ ಲಿಂಗಾಯದ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ವಿ. ಕಾಶಪ್ಪನವರ್​ ನೇಮಕ!

ಸನ್ನಿ ಲಿಯೋನ್‌ ಅಭಿಮಾನಿಯೊಬ್ಬ ಅವರ ಹೆಸರಿನಲ್ಲಿಯೇ ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿ ಪರೀಕ್ಷೆಗೆ ಅರ್ಜಿ ಹಾಕಿದ್ದಾನೆ. ಈಗ ರಾಜ್ಯ ಸರ್ಕಾರವು ಸನ್ನಿ ಲಿಯೋನ್‌ ಹೆಸರಿನಲ್ಲಿ ಹಾಲ್‌ ಟಿಕೆಟ್‌ ಬಿಡುಗಡೆ ಮಾಡಿದ್ದು, ಅವವರಿಗೆ ಕನೌಜ್‌ ಜಿಲ್ಲೆಯ ತಿರ್ವಾದಲ್ಲಿರುವ ಶ್ರೀಮತಿ ಸೋನೆಶ್ರೀ ಮೆಮೋರಿಯಲ್‌ ಗರ್ಲ್ಸ್‌ ಕಾಲೇಜ್‌ ಅನ್ನು ಪರೀಕ್ಷಾ ಕೇಂದ್ರವನ್ನಾಗಿ ನೀಡಲಾಗಿದೆ. ಸಿಂಪಲ್‌ ಮ್ಯಾನ್‌ ಎಂಬ ಎಕ್ಸ್‌ ಖಾತೆಯಿಂದ ಸನ್ನಿ ಲಿಯೋನ್‌ ಫೋಟೊ ಇರುವ ಹಾಲ್‌ಟಿಕೆಟ್‌ ಫೋಟೊ ವೈರಲ್‌ ಅಪ್‌ಲೋಡ್‌ ಮಾಡಲಾಗಿದೆ.

ಹಾಲ್‌ಟಿಕೆಟ್‌ನಲ್ಲಿ ನೋಂದಣಿಯಾದ ಮೊಬೈಲ್‌ ಸಂಖ್ಯೆಗೆ ಖಾಸಗಿ ಸುದ್ದಿ ವಾಹಿನಿ ಕರೆ ಮಾಡಿದಾಗ, ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿ ಮೊಬೈಲ್‌ ಸಂಖ್ಯೆ ನೋಂದಣಿಯಾಗಿದೆ. ಇನ್ನು, ನೋಂದಣಿಗೆ ಮುಂಬೈ ವಿಳಾಸ ನೀಡಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಸನ್ನಿ ಲಿಯೋನ್‌ ಹೆಸರಿನಲ್ಲಿ ಅರ್ಜಿ ಹಾಕಿದವರು ಫೆಬ್ರವರಿ 17ರಂದು ಪರೀಕ್ಷೆ ಬರೆಯಬೇಕಿತ್ತು. ಆದರೆ, ಯಾರೂ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿಯು ಮಾಹಿತಿ ನೀಡಿದೆ.

Exit mobile version