Site icon PowerTV

ರಾಮಮಂದಿರ ಕಟ್ಟಿರುವ ಜಾಗವೇ ಸರಿ ಇಲ್ಲ : ಸಂತೋಷ್ ಲಾಡ್ ಅಪಸ್ವರ

ಹುಬ್ಬಳ್ಳಿ : ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟಿರುವ ಜಾಗ ಸರಿಯಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಪಸ್ವರ ಎತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಮಮಂದಿರ ಕಟ್ಟಿರುವುದರಿಂದ ದೇಶದ ಬಡತನ ನಿರ್ಮೂಲನೆ ಆಗಲ್ಲ ಎಂದು ಕುಟುಕಿದ್ದಾರೆ.

ರಾಮಮಂದಿರ ಕಟ್ಟಿರುವುದು ರಾಜಕೀಯ ಇಚ್ಛಾಶಕ್ತಿ ಕಾರಣಕ್ಕೆ. ರಾಮಮಂದಿರ ಕಟ್ಟಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ರಾಮಮಂದಿರ ಕಟ್ಟಿರೋ ಜಾಗ ಸರಿ ಇಲ್ಲ. ಸುಪ್ರೀಂ ಕೋರ್ಟ್ ಹೇಳಿರುವ ಜಾಗದಲ್ಲಿ ಇವರು ಮಂದಿರ ಕಟ್ಟಿಲ್ಲ. ಬೇರೆ ಜಾಗದಲ್ಲಿ ಕಟ್ಟಿದ್ದಾರೆ. ಅದು 40 ಪರ್ಸೆಂಟ್ ಕಟ್ಟಿದ್ದಾರೆ, ಪೂರ್ಣ ಆಗಿಲ್ಲ ಎಂದು ದೂರಿದ್ದಾರೆ.

10 ವರ್ಷದಲ್ಲಿ ಮೋದಿ ಸಾಧನೆ ಏನು?

ರಾಮಮಂದಿರದಿಂದ ನಿಮ್ಮ ಬಡತನ ನಿರ್ಮೂಲನೆ ಆಗಿದೆಯಾ‌? ಅದನ್ನ ಹೇಳಿ ಯಾಕೆ ವೋಟು ಕೇಳುತ್ತೀರಿ. ದೇಶದಲ್ಲಿ 10 ವರ್ಷದಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ. 10 ವರ್ಷದಲ್ಲಿ ಏನೇ ಉದ್ಘಾಟನೆ ಮಾಡಿದ್ರು ಮೋದಿ ಒಬ್ಬರೇ. ದೇಶ ಹಳ್ಳ ಹಿಡಿದು ಹೋಗಿದೆ. 10 ವರ್ಷದಲ್ಲಿ ಬಡವರಿಗೆ ಅನಕೂಲ ಆಗಿರುವ ಒಂದೇ ಒಂದು ಕಾರ್ಯಕ್ರಮ ಇಲ್ಲ. 10 ವರ್ಷದಲ್ಲಿ ಇವರ ಸಾಧನೆ ಏನು? ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ಪ್ರಭಾವಿಯಾಗಿದ್ರೆ, ಟಿವಿ ಆಫ್ ಮಾಡಿ ಬನ್ನಿ

ಪೆಟ್ರೋಲ್, ಡಿಸೇಲ್ ದರ ಕಡಿಮೆ ಆಗಿದೆಯಾ..? ಚುನಾವಣೆ ಬಂದಾಗ ಒಂದು ಅಜೆಂಡ್ ಸೆಟ್ ಮಾಡ್ತಾರೆ .ಅಧಿಕಾರ ಇದೆ ಎಂದು ದುರುಪಯೋಗ ಮಾಡಬಾರದು. ನೀವು ಪ್ರಭಾವಿಯಾಗಿದ್ರೆ, ಟಿವಿ ಆಫ್ ಮಾಡಿ ಬನ್ನಿ ಎಂದು ಸಂತೋಷ್ ಲಾಡ್ ಸವಾಲ್​ ಹಾಕಿದ್ದಾರೆ.

Exit mobile version