Site icon PowerTV

ಮಧ್ಯ ಪ್ರಿಯರಿಗೆ ಶಾಕ್​: ಬಿಯರ್ ದರ ಏರಿಕೆ; ಕಿಕ್‌ ಇಳಿಕೆ

ಬೆಂಗಳೂರು: ಪದೆ ಪದೇ ಬಿಯರ್ ಬೆಲೆ ಏರಿಕೆ ಮಾಡ್ತಿರುವ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ಕೊಟ್ಟಿದ್ದಾರೆ. ಕಳೆದ ತಿಂಗಳಷ್ಟೆ ಮದ್ಯದ ಬೆಲೆಯಲ್ಲಿ ಏರಿಕೆ ಮಾಡಿ ಆದೇಶ ನೀಡಿದ್ದ ಸರ್ಕಾರ ಇದೀಗ ಮತ್ತೆ ಏರಿಕೆ ಮಾಡಿದೆ.

ಜನವರಿಯಲ್ಲಿ ಬಿಯರ್ ದರ ಏರಿಕೆಯಾಗ್ತಿದ್ದಂತೆ ಮಾರಾಟ ಕುಸಿತವಾಗಿದೆ. ಕಳೆದ 14 ದಿನದಲ್ಲಿ ಬಿಯರ್ ಮಾರಾಟದ ಲೆಕ್ಕಚಾರ ತಲೆಕೆಳಗಾಗಿದೆ. ಕಳೆದ ವರ್ಷ ಫೆಬ್ರವರಿ ಒಂದರಿಂದ 14ರ ವರೆಗೆ 14.35 ಲಕ್ಷ ಕೇಸ್ ಬಿಯರ್ ಸೇಲ್ ಆಗಿತ್ತು. ಆದರೆ ಈ ವರ್ಷ ಕೇವಲ 13.34 ಲಕ್ಷ ಕೇಸ್ ಬಿಯರ್ ಮಾರಾಟವಾಗಿದೆ. ದರ ಏರಿಕೆಯಿಂದ ಬರೊಬ್ಬರಿ 1 ಲಕ್ಷ ಕೇಸ್ ಮಾರಾಟ ಕುಸಿತವಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್​ನಲ್ಲಿ ಪಕ್ವತೆ ಕಾಣುತ್ತಿಲ್ಲ: ಸಿಟಿ ರವಿ ವ್ಯಂಗ್ಯ

ಜನವರಿಯಲ್ಲಿ 14 ದಿನಕ್ಕೆ 17 ಲಕ್ಷ ಕೇಸ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ ಜನವರಿಯಲ್ಲಿ 15 ಪರ್ಸೆಂಟ್ ಏರಿಕೆಯಾಗಿತ್ತು. ಈ ತಿಂಗಳು ಕೂಡ ಭರ್ಜರಿ ಮಾರಾಟದ ನಿರೀಕ್ಷೆಯಲ್ಲಿದ್ದ ಸರ್ಕಾರಕ್ಕೆ ಮದ್ಯಪ್ರಿಯರು ಶಾಕ್ ನೀಡಿದ್ದಾರೆ.

ಆದರೆ ಕಳೆದ 14 ದಿನದಲ್ಲಿ ಮಾರಾಟ ಕಮ್ಮಿಯಾದರೂ ಆದಾಯದಲ್ಲಿ ಮಾತ್ರ ಏರಿಕೆ ಆಗಿದೆ. ಕಳೆದ ವರ್ಷ 14 ದಿನದಲ್ಲಿ 1,200 ಕೋಟಿ ಆದಾಯ ಬಂದರೆ, ಈ ವರ್ಷ 1,400 ಕೋಟಿ ಆದಾಯ ಸಂಗ್ರಹವಾಗಿ, 200 ಕೋಟಿ ಅಧಿಕವಾಗಿದೆ.

Exit mobile version