Site icon PowerTV

ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆದ ಮಹಿಳೆ

ಬಾಗಲಕೋಟೆ: ರಂಭಾಪುರಿ ಜಗದ್ಗುರು ಶ್ರೀಗಳ ಕಾರಿಗೆ ಮಹಿಳೆ ಚಪ್ಪಲಿ ತೂರಿದ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದಿದೆ.

ಜಿಲ್ಲೆಯ ಕಲಾದಗಿಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ ಪೀಠಾಧಿಪತಿ ಆಯ್ಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭಕ್ತರು ಹಾಗೂ ಸ್ವಾಮೀಜಿ ನಡುವಿನ ವಿವಾದ ತಾರಕಕ್ಕೇರಿದೆ.

ವಿವಾದ ಕೋರ್ಟ್ ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ, ಮಠಕ್ಕೆ ಸೇರಿದ ಹೊಲದ ಊಳುಮೆ ಮಾಡಿದ್ದಾರೆ. ಇದರಿಂದ ಭಕ್ತರ ಆಕ್ರೋಶದ ಕಟ್ಟೆ ಹೊಡೆದಿದ್ದು, ಕಲಾದಗಿ ಗುರುಲಿಂಗೇಶ್ವರ ಮಠದಲ್ಲಿ ಮಹಿಳಾ ಭಕ್ತರಾದಿಯಾಗಿ ಎಲ್ಲರೂ ಪ್ರತಿಭಟನೆಗಿಳಿದಿದ್ದಾರೆ.

ಈ ವೇಳೆ ರಂಭಾಪುರಿ ಶ್ರೀ ಕಾರಿನ ಮೇಲೆ ಮಹಿಳೆಯೋರ್ವರು ಚಪ್ಪಲಿ ಎಸೆದಿದ್ದಾರೆ.

ರಂಭಾಪುರಿ ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು, ರಂಭಾಪುರಿ ಶ್ರೀ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಹಾಕಿ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ವೇಲೆ ಮಹಿಳಾ ಭಕ್ತೆಯೊರ್ವರು ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾಳೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

Exit mobile version