Site icon PowerTV

ಡಿಕೆಸು ವಿರುದ್ಧ ಯಾರೇ ಸ್ಪರ್ಧಿಸಿದ್ರೂ ಚಿಂತೆಯಿಲ್ಲ: ಡಿ.ಕೆ ಶಿವಕುಮಾರ್

ಮಂಗಳೂರು: ಸಂಸದ ಡಿ.ಕೆ ಸುರೇಶ್​ ವಿರುದ್ಧ ಯಾರೇ ಸ್ಪರ್ಧಿಸಿದ್ರೂ ನನಗೆ ಚಿಂತೆಯಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ತಿಳಿಸಿದ್ದಾರೆ. 

ಮಂಗಳೂರಿನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧವೇ ಸ್ಪರ್ಧಿಸಿದ್ದವನು ನಾನು ನನ್ನ ಸಹೋದರನ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಆತನೇ ಗೆದ್ದಿದ್ದಾನೆ. ಬಿಜೆಪಿ, ಜೆಡಿಎಸ್ ನನ್ನ ಸಹೋದರನ ವಿರುದ್ಧ ಸ್ಪರ್ಧಿಸಿದ್ದಾಗಲೂ ಗೆದ್ದಿದ್ದಾನೆ. ಡಿಕೆ ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿ ಅಲ್ಲ, ಹಳ್ಳಿಯ ಸಂಸದ ಎಂದು ಹೇಳಿದರು.

ದೇವೇಗೌಡ, ಕುಮಾರಸ್ವಾಮಿ ನಮ್ಮಲ್ಲಿ ಎಂಪಿ ಆಗಿದ್ದವರು. ಹಳೇ ಎಂಪಿಗಳು ಹಾಗೂ ಈ ಎಂಪಿ ವ್ಯತ್ಯಾಸ ಜನ ನೋಡಿದ್ದಾರೆ‌. ಬೆಂಗಳೂರು ಗ್ರಾಮಾಂತರದಲ್ಲಿ ಯಾರೇ ನಿಂತರೂ ಸ್ವಾಗತಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Exit mobile version