Site icon PowerTV

ದಂಗಲ್​ ಸಿನಿಮಾ ನಟಿ ಸುಹಾನಿ ಭಟ್ನಾಗರ್​ ನಿಧನ!

ಮುಂಬೈ: ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್​ ಕಿರಿಯ ಪುತ್ರಿಯಾಗಿ ಬಬಿತಾ ಕುಮಾರಿ ಪಾತ್ರ ನಿರ್ವಹಿಸಿದ್ದ ನಟಿ ಸುಹಾನಿ ಭಟ್ನಾಗರ್ ತಮ್ಮ 19ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಸುಹಾನಿ ಭಟ್ನಾಗರ್ ಫರಿದಾಬಾದ್‌ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಟಿಯ ನಿಧನದಿಂದ ಎಲ್ಲರೂ ಶಾಕ್ ಆಗಿದ್ದಾರೆ. ಅವರು ದಂಗಲ್ ಚಿತ್ರದಿಂದ ಜನಪ್ರಿಯತೆಯನ್ನು ಗಳಿಸಿದರು ಮತ್ತು ತನ್ನ ಬಬ್ಬಿ ನಟನೆಯಿಂದ ಎಲ್ಲರನ್ನೂ ಆಕರ್ಷಿಸಿದರು.

ಇದನ್ನೂ ಓದಿ: Powertv Exclusive : ವೀರಸಿಂಧೂರ ಲಕ್ಷ್ಮಣ(D59) – ಅಡ್ವಾನ್ಸ್ ಪಡೆದು ಕೈಕೊಟ್ರಾ ತರುಣ್​, ಡಿಬಾಸ್..​?

ಸುಹಾನಿ ಭಟ್ನಾಗರ್ ಕಳೆದ ಕೆಲವು ದಿನಗಳಿಂದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಲಿನ ಮೂಳೆ ಮುರಿತವಾಗಿತ್ತು. ಅದರ ಚಿಕಿತ್ಸೆಗಾಗಿ ಔಷಧಗಳನ್ನೂ ತೆಗೆದುಕೊಳ್ಳುತ್ತಿದ್ದಳು. ಆದರೆ ಔಷಧಿಗಳ ಅಡ್ಡ ಪರಿಣಾಮದಿಂದ ಕಾಲುಗಳು ನೀರಿನಿಂದ ತುಂಬಿವೆ. ಚಿಕಿತ್ಸೆ ಫಲಕಾರಿಯಾಗದೆ ಸುಹಾನಿ ಸಾವನ್ನಪ್ಪಿದ್ದಾಳೆ. ನಟಿಯ ಅಂತಿಮ ಸಂಸ್ಕಾರವನ್ನು ಫರಿದಾಬಾದ್‌ನ ಸೆಕ್ಟರ್ 15 ನಲ್ಲಿರುವ ಅಜೆಂಡಾ ಸ್ಮಶಾನದಲ್ಲಿ ನೆರವೇರಿಸಲಾಗುತ್ತದೆ.

Exit mobile version