Site icon PowerTV

6ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ!

ಉಡುಪಿ: ಪರೀಕ್ಷೆ ಭೀತಿಯಿಂದ ಮನನೊಂದ ಕಾಲೇಜು ವಿದ್ಯಾರ್ಥಿಯೋರ್ವ ಕ್ಲಾಸ್ ರೂಮ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಣಿಪಾಲದ ಕಾಲೇಜಿನಲ್ಲಿ ನಡೆದಿದೆ.

ಇದನ್ನೂ ಓದಿ: ಮಧ್ಯ ಪ್ರಿಯರಿಗೆ ಶಾಕ್​: ಬಿಯರ್ ದರ ಏರಿಕೆ; ಕಿಕ್‌ ಇಳಿಕೆ

20 ವರ್ಷದ ಸತ್ಯಂ ಸುಮನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮಣಿಪಾಲದ ಮಾಹೆಯ MCHP ವಿಭಾಗದಲ್ಲಿ ಸತ್ಯಂ ಸುಮನ್ ದ್ವಿತೀಯ ಬಿಎಸ್ಸಿ ಓದುತ್ತಿದ್ದ. ನಿನ್ನೆ ಮಧ್ಯಾಹ್ನ ಪರೀಕ್ಷೆ ನಡೆಯುತ್ತಿದ್ದ ವೇಳೆ ಸತ್ಯಂ ಸುಮನ್ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಕೆ ಮಾಡಿದ್ದ ಎನ್ನಲಾಗಿದೆ.

 

ಇದನ್ನು ಗಮನಿಸಿದ ಶಿಕ್ಷಕರು ಆತನನ್ನು ಪರೀಕ್ಷಾ ಕೊಠಡಿಯಿಂದ ಹೊರ ಹಾಕಿದ್ದಾರೆ. ಇದರಿಂದ ಮನನೊಂದ ವಿದ್ಯಾರ್ಥಿ ಕಾಲೇಜಿನ 6ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version