Site icon PowerTV

58ನೇ ಜ್ಞಾನಪೀಠ ಪ್ರಶಸ್ತಿ ಪ್ರಕಟ: ಕವಿ ಗುಲ್ಜಾರ್ ಹಾಗು ರಾಮಭದ್ರಾಚಾರ್ಯಗೆ ಪ್ರಶಸ್ತಿ!

ನವದೆಹಲಿ: 58ನೇ ಜ್ಞಾನಪೀಠ ಪ್ರಶಸ್ತಿ(2023)ಗೆ ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ಹಾಗೂ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು ಭಾಜನರಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ.

ಇದನ್ನೂ ಓದಿ: ISRO ಮತ್ತೊಂದು ಸಾಧನೆ: ಇನ್‌ಸ್ಯಾಟ್-3ಡಿಎಸ್ ಉಡಾವಣೆ

ಹಿಂದಿ ಚಿತ್ರರಂಗದಲ್ಲಿ ಗುಲ್ವಾರ್ ಖ್ಯಾತರಾಗಿದ್ದಾರೆ. ಅವರೂ ಪ್ರಸಿದ್ದ ಉರ್ದು ಕವಿಯು ಹೌದು. ಈ ಹಿಂದೆ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2002), ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2013), ಪದ್ಮಭೂಷಣ (2004) ಹಾಗೂ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಇನ್ನು, ಮಧ್ಯ ಪ್ರದೇಶದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಪ್ರಸಿದ್ಧ ಹಿಂದೂ ಆಧ್ಯಾತ್ಮಿಕ ನಾಯಕ ಮತ್ತು ಶಿಕ್ಷಣ ತಜ್ಞರಾಗಿದ್ದು 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

Exit mobile version