Site icon PowerTV

ನನ್ನ ಪ್ರೀತಿಯ ಮಗನಿಗೆ ಹ್ಯಾಪಿ ಬರ್ತ್​ಡೇ : ಹಿರಿಯ ಮಗನಿಗೆ ಮದರ್ ಇಂಡಿಯಾ ಸ್ಪೆಷಲ್ ವಿಶ್

ಬೆಂಗಳೂರು : ನಟ ದರ್ಶನ್ ತೂಗುದೀಪ ಅವರಿಗೆ ಮಂಡ್ಯ ಸಂಸದೆ ಹಾಗೂ ಹಿರಿಯ ನಟಿ ಸುಮಲತಾ ಅಂಬರೀಶ್ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ. ಪತಿ ಅಂಬರೀಶ್, ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ದರ್ಶನ್ ಒಟ್ಟಿಗೆ ಇರುವ ಫೋಟೋಸ್ ಕೂಡಾ ಹಂಚಿಕೊದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಡಿ ಬಾಸ್ ಹುಟ್ಟುಹಬ್ಬಕ್ಕೆ ನಟ, ನಟಿಯರು ಶುಭಾಶಯ ತಿಳಿಸುತ್ತಿದ್ದಾರೆ. ದರ್ಶನ್ ಅವರನ್ನು ತನ್ನ ಹಿರಿಯ ಮಗನೆಂದೇ ಹೇಳಿಕೊಳ್ಳುವ ಸುಮಲತಾ ಅವರು ಕೂಡಾ ಪುತ್ರನಿಗೆ ಶುಭಾಶಯ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ‘ನನ್ನ ಪ್ರೀತಿಯ ಮಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ ಹಾರ್ದಿಕ ಶುಭಾಶಯಗಳು. ಸಿನಿಮಾ ರಂಗಕ್ಕೆ ಬಂದು 25 ವರ್ಷಗಳು, ಕಾಟೇರ ಸಿನಿಮಾ 50 ದಿನ ಪೂರೈಸಿದ ಖುಷಿ, ಈ ಸಾಧನೆಯ ಹೆಜ್ಜೆಗೆ, ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ.

ನೂರಾರು ವರ್ಷಗಳ ಕಾಲ ಅಭಿಮಾನಿಗಳನ್ನು ರಂಜಿಸು

ನಿನ್ನ ಬೆಳವಣಿಗೆ, ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಎಲ್ಲವೂ ಮೆಚ್ಚುವಂಥದ್ದು. ನೂರಾರು ವರ್ಷಗಳ ಕಾಲ ನಿನ್ನ ಸೆಲೆಬ್ರೆಟಿಗಳನ್ನು (ಅಭಿಮಾನಿಗಳನ್ನು) ರಂಜಿಸುತ್ತಾ, ಸುಖ ಪಯಣ ನಿನ್ನದಾಗಲಿ ಎಂದು ಹಾರೈಸುವೆ ಎಂದು ಮದರ್ ಇಂಡಿಯಾ ಸುಮಲತಾ ಡಿ ಬಾಸ್​ಗೆ ಶುಭ ಹಾರೈಸಿದ್ದಾರೆ.

Exit mobile version