Site icon PowerTV

ಸಿದ್ದರಾಮಯ್ಯ ಬಜೆಟ್​ನಲ್ಲಿ ಪಕ್ವತೆ ಕಾಣುತ್ತಿಲ್ಲ: ಸಿಟಿ ರವಿ ವ್ಯಂಗ್ಯ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್​ನಲ್ಲಿ ಪಕ್ವತೆಯೇ ಕಾಣುತ್ತಿಲ್ಲ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ ರವಿ ಆರೋಪಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ 15ರ ದಾಖಲೆಯ ಬಜೆಟ್​ನಲ್ಲಿ ಪಕ್ವತೆ ಕಾಣುತ್ತಿಲ್ಲ. ಸಿದ್ದರಾಮಯ್ಯ ಅವರ ಹೆಸರಲ್ಲಿ ಇರುವ ರಾಮನ ಆರ್ದಶ ಕಾಣುತ್ತಿಲ್ಲ. ಚಾರ್ವಕರ ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ ಎನ್ನುವ ನೀತಿ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ಡಿ.ಕೆ ಶಿವಕುಮಾರ್  ಬಜೆಟ್ ನಲ್ಲಿ ಬ್ರಾಂಡ್ ಬೆಂಗಳೂರು ಎಲ್ಲಿ ಕಾಣುತ್ತಿದೆ. ಚದುರಡಿಗೆ 75 ರೂಪಾಯಿ ಕನಕಪುರ ಟ್ಯಾಕ್ಸ್ ಆಗಿದೆ. ಸಿದ್ದರಾಮಯ್ಯ ಅವರು ಮೌನ ಮುರಿಯಬೇಕು. ಈ ಬಜೆಟ್​ನಿಂದ ಯಾವುದೇ ಪ್ರಯೋಜನವಿಲ್ಲ ಎಂದರು.

Exit mobile version