Site icon PowerTV

ದೊಡ್ಡವರು ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರೆ : ಪ್ರಜ್ವಲ್ ರೇವಣ್ಣ

ಹಾಸನ : ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರು ಆರೋಗ್ಯವಾಗಿದ್ದಾರೆ, ಏನು ತೊಂದರೆಯಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ಹಾಗೂ ಇಂದು ಬೆಳಗ್ಗೆ ಮಾತನಾಡಿದೆ. ಸ್ವಲ್ಪ ಕೆಮ್ಮು ಇತ್ತು ಅಂದರು. ಇಂದು ಸಂಜೆ ಅಥವಾ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗ್ತಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಅದರ ಬಗ್ಗೆ ಚರ್ಚೆ ಮಾಡಲ್ಲ. ಅದು ಅವರ ಪಕ್ಷದ ವಿಚಾರ, ಅವರು ಕುಳಿತುಕೊಂಡು ಸರಿ ಮಾಡುವ ಕೆಲಸ ಮಾಡ್ತಾರೆ. ನಮ್ಮ ಪಕ್ಷದಲ್ಲಿ ಯಾರಾದರೂ ಧ್ವನಿ ಎತ್ತಿದರೆ ಕುಮಾರಣ್ಣ ಮಾತನಾಡ್ತಾರೆ. ಅವರ ಪಕ್ಷದವರು ಅದರ ಬಗ್ಗೆ ಚರ್ಚೆ ಮಾಡಬೇಕು ಎಂದು ಜಾಣ್ಮೆಯ ಉತ್ತರ ನೀಡಿದರು.

ಅವ್ರ ಪಕ್ಷದಲ್ಲೂ ಮಾಡ್ತಾರೆ, ನಾವೂ ಮಾಡ್ತಿವಿ

ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆಯಿಂದ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೆ ಎನ್ನುವ ಭಾವನೆ ಇದೆ. ದೆಹಲಿಯಲ್ಲೂ ಮಾತನಾಡುತ್ತಿದ್ದಾರೆ. ಹಾಗಾಗಿ, ಎಲ್ಲರೂ ಒಟ್ಟಿಗೆ ಹೋಗುವಂತಹ ಕೆಲಸವನ್ನು ನಾವು ಮಾಡ್ತಿವಿ. ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಬಗೆಹರಿಸುವಂತೆ ಕೆಲಸವನ್ನು ಅವರ ಪಕ್ಷದಲ್ಲೂ ಮಾಡ್ತಾರೆ. ನಮ್ಮ ಪಕ್ಷದಲ್ಲೂ ಮಾಡ್ತಾರೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

Exit mobile version