Site icon PowerTV

ನನ್ನ ಸಾಧನೆ ಬಗ್ಗೆ ಪುಸ್ತಕ ಬಿಡುಗಡೆ ಮಾಡುತ್ತೇನೆ : ಪ್ರಜ್ವಲ್ ರೇವಣ್ಣ

ಹಾಸನ : ನಾನು ಮಾಡಿರುವ ಕೆಲಸ, ತಂದಿರುವ ಅನುದಾನದ ಬಗ್ಗೆ ಒಂದು ಪುಸ್ತಕದ ಮೂಲಕ ಇಡೀ ಜಿಲ್ಲೆಯ ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಯ ಜನ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಿದ್ದರು. ಅದಕ್ಕೆ ತಕ್ಕಂತೆ ದುಡಿಮೆ ಮಾಡಿದ್ದೇನೆ ಎಂದು ತಿಳಿಸಿದರು.

ಕಳೆದ 5 ವರ್ಷದಲ್ಲಿ ಹನ್ನೆರಡುವರೆ ಸಾವಿರ ಕೋಟಿ ಕೇಂದ್ರದಿಂದ ಅನುದಾನ ತಂದಿದ್ದೇನೆ. ನನಗೆ ಮತ್ತೊಂದು ಅವಕಾಶ ಕೊಟ್ಟರೆ ಇನ್ನೂ ಹೆಚ್ಚಿನ ಕೆಲಸವನ್ನು ನಮ್ಮ ಜಿಲ್ಲೆಗೆ, ಜಿಲ್ಲೆಯ ಜನರಿಗೆ ಮಾಡ್ತಿನಿ. ಅವರ ದಿನಾಂಕ ತಗೊಂಡು ನನ್ನ ಸಾಧನೆಯ ಬಗ್ಗೆ ಪುಸ್ತಕವನ್ನು ಅವರ ಮುಖಾಂತರ ಬಿಡುಗಡೆ ಮಾಡುತ್ತೇನೆ. ಆ ಆಸೆ ನನಗೂ ಕೂಡ ಇದೆ ಎಂದು ತಿಳಿಸಿದರು.

ನಾವು ಕಾಂಗ್ರೆಸ್‌ನ ತಿರಸ್ಕಾರ ಮಾಡಬೇಕು

ಎಲ್ಲರದ್ದು ಒಂದೇ ಉದ್ದೇಶ, ನಾವು ಕಾಂಗ್ರೆಸ್‌ನ ತಿರಸ್ಕಾರ ಮಾಡಬೇಕು. ನರೇಂದ್ರ ಮೋದಿಯ ಅವರಿಗೆ ಮತ್ತೊಂದು ಬಾರಿ ಶಕ್ತಿ ಕೊಡುವ ಕೆಲಸ ಮಾಡಬೇಕು. ಈ ದೇಶದ ಅಭಿವೃದ್ಧಿ, ಈ ದೇಶವನ್ನು ಕಟ್ಟಲು ಎಲ್ಲರೂ ಒಂದಾಗಿದ್ದೇವೆ. ಬಿಜೆಪಿ ಮುಖಂಡರು ಸಲಹೆ ಕೊಡುತ್ತಿದ್ದಾರೆ. ಜೆಡಿಎಸ್ ಮುಖಂಡರು ಬಿಜೆಪಿ ಮುಖಂಡರ ಜೊತೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅನುಕೂಲ ಆಗುತ್ತೆ, ಖಂಡಿತವಾಗಿಯೂ ಒಳ್ಳೆಯದು ಆಗುತ್ತೆ. ನಾವು ಮಾಡಿರುವ ಕೆಲಸ, ನಾವು ತಂದಿರುವ ಯೋಜನೆಗಳು ನಮ್ಮ ಕೈ ಹಿಡಿಯುತ್ತೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

Exit mobile version