Site icon PowerTV

ಜನರ ಬದುಕು ಕಟ್ಟಿಕೊಡುವ ಬಜೆಟ್ : ಡಿ.ಕೆ ಶಿವಕುಮಾರ್

ಬೆಂಗಳೂರು: ನಮ್ಮಬಜೆಟ್​ ಜನರ ಬದುಕು ಕಟ್ಟಿಕೊಡುವಂತಹ ಬಜೆಟ್​ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. 

ಬಜೆಟ್​ ಮಂಡನೆ ಬಳಿಕ ಸುದ್ದಗಾರರೊಂದಿಗೆ ಮಾತನಾಡಿದ ಅವರು ನಾನು ಸಿಎಂ ಸಿದ್ದರಾಮಯ್ಯಗೆ  ಅಭಿನಂದನೆ ಸಲ್ಲಿಸ್ತೇನೆ. ಕಾಂಗ್ರೆಸ್‌ನ 15ನೇ ಬಜೆಟ್ ದೇಶಕ್ಕೆ ಮಾದರಿ ಬಜೆಟ್​ನ್ನು ಮಂಡಿಸಿದ್ದಾರೆ.

ಇದುವರೆಗೂ ಯಾರೂ ಬಜೆಟ್ ಬಾಯ್ಕಾಟ್ ಮಾಡಿ ಹೊರಗೆ ಹೋಗಿಲ್ಲ. ‘ಬಾಯ್ಕಾಟ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ ಎಂದು ಬಿಜೆಟ್​ ಮೇಲೆ ಅಕ್ರೋಶ ವ್ಯಕ್ತಪಡಿದ್ದಾರೆ.

ಬಜೆಟ್ ಲೇವಡಿ ಮಾಡಿದ ಹೆಚ್‌ಡಿಕೆ ವಿರುದ್ಧ ಡಿಕೆಶಿ ಗರಂ

ಜನ್ರಿಗೆ ಕೊಟ್ಟ ಭರವಸೆಯನ್ನ ಕಾಂಗ್ರೆಸ್ ಈಡೇರಿಸಿದೆ. ‘ಕುಮಾರಸ್ವಾಮಿಯವರು ಅಸೆಂಬ್ಲಿಗೆ ಬಂದಿಲ್ಲ’
ಎಲ್ಲೋ ಕೂತ್ಕೊಂಡು ಈಗ ಪ್ರತಿಭಟಿಸಿದ್ರೆ ಹೇಗೆ..? ಬಿಜೆಪಿ, ಜೆಡಿಎಸ್ ಶಾಸಕರು ಸಂವಿಧಾನಕ್ಕೆ ಅವಮಾನಿಸಿದ್ದಾರೆ. ನಮ್ಮದು ಜನರ ಬದುಕು ಕಟ್ಟಿಕೊಡುವ ಬಜೆಟ್ ಎಂದು ಬಿಜೆಪಿ, ಜೆಡಿಎಸ್ ನಾಯಕರಿಗೆ ಡಿಸಿಎಂ ಡಿಕೆಶಿ ಕೌಂಟರ್ ನೀಡಿದ್ದರು.

Exit mobile version