Site icon PowerTV

ಸೋದರಮಾವನ ಜೊತೆ ‘ಕರಿಮಣಿ ಮಾಲೀಕ ನೀನಲ್ಲ’ ಹಾಡಿಗೆ ಪತ್ನಿ ರೀಲ್ಸ್, ಮನನೊಂದು ಪತಿ ಆತ್ಮಹತ್ಯೆ

ಚಾಮರಾಜನಗರ : ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಫಿದಾ ಆಗದವರೇ ಇಲ್ಲ. ಆದರೆ, ಈ ರೀಲ್ಸ್​ ಒಬ್ಬ ವ್ಯಕ್ತಿಯನ್ನೇ ಬಲಿ ತೆಗೆದುಕೊಂಡಿದೆ.

ಸೋದರಮಾವನ ಜೊತೆ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಪತ್ನಿ ರೀಲ್ಸ್ ಮಾಡಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪಿ.ಜಿ. ಪಾಳ್ಯ ಗ್ರಾಮದಲ್ಲಿ ನಡೆದಿದೆ.

ಪಿ.ಜಿ‌.ಪಾಳ್ಯ ಗ್ರಾಮದ ಕುಮಾರ್ (33) ನೇಣಿಗೆ ಶರಣಾದ ಪತಿ. ಪತ್ನಿ ಮಾಡಿದ ರೀಲ್ಸ್ ನಿಂದ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

ಈ ಸುದ್ದಿ ಓದಿದ್ದೀರಾ? : ಹುಡುಗ್ರೇ ಹುಷಾರ್‌.. ಕರಿ ಮಣಿ ಮಾಲಿಕ ನೀ ‘ನಲ್ಲ’ಅಂತ ಮೋಸ ಮಾಡ್ತಾಳಂತೆ ಈ ರೀಲ್ಸ್‌ ಸುಂದ್ರಿ! 

ಹೆಂಡ್ತಿಯ ರೀಲ್ಸ್​ ಮೋಹ ಪತಿಯ ಪ್ರಾಣಕ್ಕೆ ಕುತ್ತು 

ಪತ್ನಿ ರೂಪಾ ಸೋದರಮಾವ ಹಾಗೂ ಸಹೋದರಿ ಜೊತೆಗೆ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ರೀಲ್ಸ್ ಮಾಡಿದ್ದರು. ರೀಲ್ಸ್ ವಿಚಾರಕ್ಕೆ ದಂಪತಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಕ್ಷುಲ್ಲಕ್ಕ ಕಾರಣಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಮನನೊಂದ ಪತಿ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Exit mobile version