Site icon PowerTV

ಡೋಂಟ್ ವರಿ, ನಾನು ಆರೋಗ್ಯವಾಗಿದ್ದೇನೆ : ಹೆಚ್.ಡಿ. ದೇವೇಗೌಡ ಟ್ವೀಟ್

ಬೆಂಗಳೂರು : ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸ್ವತಃ ದೇವೇಗೌಡ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಹೆಚ್​ಡಿಡಿ, ಡೋಂಟ್ ವರಿ, ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ನನ್ನ ಆರೋಗ್ಯಕ್ಕೆ ಸಂಬಂಧಿಸಿ ಕೆಲವು ಮಾಧ್ಯಮಗಳಲ್ಲಿ ಅತಿರಂಜಿತ ವರದಿಗಳು ಬರುತ್ತಿವೆ ಎಂದು ತಿಳಿದುಬಂತು. ಈ ವಿಚಾರದಲ್ಲಿ ನಾನೊಂದು ಸ್ಪಷ್ಟೀಕರಣ ನೀಡಲು ಬಯಸುತ್ತೇನೆ. ನಾನು ಆಸ್ಪತ್ರೆಗೆ ಹೋಗಿರುವುದು ಕೇವಲ ಸಾಮಾನ್ಯ ಆರೋಗ್ಯ ತಪಾಸಣೆಗೆ. ನಾನು ಶೀಘ್ರ ಮನೆಗೆ ತೆರಳಲಿದ್ದೇನೆ. ಯಾವುದೇ ರೀತಿಯ ಚಿಂತೆಗಳಿಗೆ ಕಾರಣವಿಲ್ಲ ಎಂದು ಪೋಸ್ಟ್​ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಲೋಕಸಭೆಗೆ ನಾನು ನಿಲ್ಲಲ್ಲ, ನಿಖಿಲ್ ಕೂಡ ನಿಲ್ಲಲ್ಲ : ಹೆಚ್.ಡಿ. ದೇವೇಗೌಡ ಸ್ಪಷ್ಟನೆ

ಇನ್ನು ಈ ಬಗ್ಗೆ ದೇವೇಗೌಡರು ಆರೋಗ್ಯವಾಗಿಯೇ ಇದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಮಣಿಪಾಲ್‌ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ದೇವೇಗೌಡ ಅವರು ಆಹಾರ ಸೇವನೆ ಮಾಡುತ್ತಿದ್ದಾರೆ. ಅವರ ಉಸಿರಾಟವೂ ಸಹಜ ಸ್ಥಿತಿಗೆ ಬರುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Exit mobile version