Site icon PowerTV

HDDದು ಗಟ್ಟಿ ಜೀವ, ದೇವರ ಆಶೀರ್ವಾದ ಅವರಿಗಿದೆ : ಹೆಚ್.ಡಿ. ಕುಮಾರಸ್ವಾಮಿ

ಮಂಡ್ಯ : ದೇವೇಗೌಡ್ರ ಅಭಿಮಾನಿಗಳು ಭಯ ಪಡಬೇಕಿಲ್ಲ. ಗಟ್ಟಿ ಜೀವ, ದೇವರ ಆಶೀರ್ವಾದ ಅವರಿಗಿದೆ ಎಂದು ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ವಾತಾವರಣ ಸಮಸ್ಯೆಯಿಂದ ಸಮಸ್ಯೆಯಾಗಿದೆ. ಆತಂಕ ಪಡಬೇಕಿಲ್ಲ, ಇನ್ನೂ‌ ಮೂರು ದಿನ‌ ಆಸ್ಪತ್ರೆಯಲ್ಲೆ ಇರ್ತಾರೆ ಎಂದು ತಿಳಿಸಿದರು.

ಈಗಲೇ ಮನೆಗೆ ಹೋಗ್ತಿನಿ ಅಂತಿದ್ದಾರೆ, ಆರಾಮವಾಗಿದ್ದಾರೆ. ಮೂರು ದಿನ ರೆಸ್ಟ್ ಮಾಡಲು ಹೇಳಿದ್ದೇವೆ. ಈಗಲೇ ಹೋಗ್ತೀನಿ ಅಂತಿದ್ದಾರೆ. ಮಂಡ್ಯ ಸಭೆಗೆ ಹೋಗ್ತೇಕಿತ್ತು ಅಂದ್ರು. ನಾವೇ ರೆಸ್ಟ್ ಮಾಡಿ, ಆಮೆಲೆ ಹೋಗಬಹುದು ಅಂತ ಹೇಳಿದ್ದೇವೆ. ಎಲೆಕ್ಷನ್ ಸಂಬಂಧ ಮಂಡ್ಯದಲ್ಲಿ ಸಭೆ ಇದೆ. ಅದಕ್ಕೆ ಬರ್ತಿನಿ ಅಂತ ಜಿ.ಟಿ ದೇವೇಗೌಡ್ರಿಗೆ ಹೇಳಿದ್ದಾರೆ. ಆದ್ರೆ, ರೆಸ್ಟ್ ಮಾಡಿ ಆಮೆಲೆ‌ ಮಾಡೋಣ ಅಂತ ಜಿಟಿಡಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಯಾವುದೇ ರೀತಿ ಆತಂಕ ಪಡಬೇಕಿಲ್ಲ

ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಯಾವುದೇ ರೀತಿ ಆತಂಕ ಪಡಬೇಕಿಲ್ಲ. ಇತ್ತೀಚೆಗೆ ದೆಹಲಿಯ ವಾತಾವರಣ ಸಮಸ್ಯೆಯಿಂದ ಹೀಗಾಗಿದೆ. ಆರೋಗ್ಯ ಸಮಸ್ಯೆಯಿಂದ ಹೀಗಾಗಿದ್ದು, ವೈದ್ಯರು ಆಸ್ಪತ್ರೆಗೆ ಬಂದು ತೋರಿಸಿಕೊಳ್ಳುವಂತೆ ಹೇಳಿದ್ರು. ಹೀಗಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಮೂರು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ, ರೆಸ್ಟ್ ಮಾಡಲಿದ್ದಾರೆ ಎಂದು ತಿಳಿಸಿದರು.

Exit mobile version