Site icon PowerTV

29 ರೂ. ‘ಭಾರತ್ ಬ್ರಾಂಡ್ ಅಕ್ಕಿ’ ಖರದೀಸಲು ಮುಗಿಬಿದ್ದಿ ಜನ

ಉತ್ತರಕನ್ನಡ : ಕೇಂದ್ರ ಸರ್ಕಾರ ‘ಭಾರತ್ ಬ್ರಾಂಡ್ ಅಕ್ಕಿ’ ಮಾರಾಟ ಆರಂಭಿಸಿದ್ದು, ಉತ್ತರ ಕನ್ನಡ ಜಿಲ್ಲಾದ್ಯಂತ ಜನರು ಬಿರು ಬಿಸಿಲನ್ನೂ ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು 29 ರೂಪಾಯಿಯಂತೆ 10 ಕೆ.ಜಿ ಅಕ್ಕಿ ಬ್ಯಾಗ್ ಖರದೀಸಲು ಮುಗಿ ಬಿದ್ದಿದ್ದಾರೆ‌.

ಕೇಂದ್ರದ 29 ರೂಪಾಯಿ ಕೆ.ಜಿ ಅಕ್ಕಿಯ ಸಂಚಾರಿ ವಾಹನ ಈಗಾಗಲೇ ಉತ್ತರಕನ್ನಡ ಜಿಲ್ಲೆ ಶಿರಸಿ, ಸಿದ್ದಾಪುರ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ವಿತರಣೆ ಮಾಡುತ್ತಿದೆ. ಎಲ್ಲಾ ಕಡೆ ಅಕ್ಕಿ ತುಂಬಿದ ವಾಹನ ಬಂದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಿ ಕೊಳ್ಳಲು ಓಡೋಡಿ ಬರುತ್ತಿದ್ದಾರೆ.

ಲಾರಿಯಲ್ಲಿ ತುಂಬಿಕೊಂಡು ಬಂದಿದ್ದ ಅಕ್ಕಿ ಅರ್ಧ ಗಂಟೆಯಲ್ಲಿ ಖಾಲಿಯಾಗುತ್ತಿದೆ. ಅಷ್ಟೊಂದು ಸಂಖ್ಯೆಯಲ್ಲಿ ಜನ ಈ ಅಕ್ಕಿ ಖರೀದಿಗೆ ಮುಗಿ ಬಿಳುತ್ತಿದ್ದಾರೆ‌. ಕೆಲವು ಕಡೆಗಳಲ್ಲಿ ಜನರನ್ನ ನಿಯಂತ್ರಣ ಮಾಡುವುದುದೇ ಪೊಲೀಸರಿಗೆ ಒಂದು ಸಾಹಸವಾಗಿದೆ. ಕಡಿಮೆ ಬೆಲೆಗೆ ಅಕ್ಕಿ ಸಿಗುತ್ತಿದೆ ಎಂದು ತಿಳಿದು ಕಾರು, ಬೈಕ್, ಆಟೋಗಳಲ್ಲಿ ಬಂದು ಅಕ್ಕಿಯನ್ನ ಸಾಗಾಟ ಮಾಡುತ್ತಿದ್ದಾರೆ.

Exit mobile version