Site icon PowerTV

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ : ಸ್ಥಳದಲೇ ಚಾಲಕ ಸಾವು

ಮಂಡ್ಯ: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರುಗಳು ಡಿಕ್ಕಿ ಹೊಡೆದ ಭೀಕರ ಅಪಘಾಥ ಸಂಭವಿಸಿ ಚಾಲಕ ಸ್ಥಳದಲೇ ಮೃತಪಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಬಳಿ ನಡೆದಿದೆ.

 ಘಟನೆ ನಡೆದಿದ್ದು ಹೇಗೆ..?

ಮೈಸೂರು ಕಡೆಗೆ ಸ್ವಿಫ್ಟ್ ಕಾರು, ಬೆಂಗಳೂರಿನತ್ತ ವರ್ನಾ ಕಾರು ಹೊರಟಿತ್ತು. ಈ ವೇಳೆ ವರ್ನಾ ಕಾರು ಡಿವೈಡರ್ ಹಾರಿ ಬಂದು ಮೈಸೂರಿನ ಕಡೆ ಹೋಗುತ್ತಿದ ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರು ಡಿಕ್ಕಿಯಾದ ರಭಸಕ್ಕೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಯಾಳುಗಳನ್ನು ಮೈಸೂರು ಖಾಸಗಿ ಆಸ್ವತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

Exit mobile version