Site icon PowerTV

ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಯಾವಾಗ? : ಬಿ.ವೈ. ವಿಜಯೇಂದ್ರ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಕೊಡುತ್ತೇವೆ ಅಂದ್ರು. ಆದರೆ, ಕೊಡುವ ಬಗ್ಗೆ ಯಾವುದೇ ಚಕಾರವಿಲ್ಲ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ದೂರಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಅವರು, ನುಡಿದಂತೆ ನಡೆಯುವ ಸರ್ಕಾರ ನಮ್ಮದು ಅಂತ ಹೇಳ್ತಾನೇ ಇದ್ದಾರೆ. ಸ್ತ್ರೀಶಕ್ತಿ ಸಂಘಗಗಳಿಗೆ ಯಾವುದೇ ಅನುದಾನ ಕೊಟ್ಟಿಲ್ಲ ಎಂದು ಕುಟುಕಿದರು.

ಸ್ಟಾಂಪ್ ಡ್ಯೂಟಿ‌ ಹೆಚ್ಚಳವಾಗಿದೆ. ಪಾರ್ಟಿಶನ್ ಡೀಡ್ ಗೆ ದರ ಹೆಚ್ಚಿಸಲಾಗಿದೆ. ಭೂ ಕಂದಾಯ ಶುಲ್ಕ ಹೆಚ್ಚಳ ಮಾಡಿದ್ದಾರೆ. ಪಂಪ್ ಸೆಟ್ ಶುಲ್ಕ 2.5 ಲಕ್ಷ ರೈತರಿಗೆ ಹೊರೆಯಾಗಿದೆ. ಕಾಂಗ್ರೆಸ್​ ಸರ್ಕಾರ ಶಕ್ತಿ ಯೋಜನೆ ನೀಡಿದೆ. ಹಳೆಯ ಬಸ್ಸುಗಳನ್ನೇ ಓಡಿಸ್ತಿದೆ. ಏನಾದರೂ ಹೆಚ್ಚು ಕಡಿಮೆ ಆದರೆ ಏನು ಮಾಡಬೇಕು..? ಎಂದು ಬೇಸರಿಸಿದರು.

ರೈತರು ಎರಡು ತುತ್ತು ಅನ್ನ ತಿನ್ನೋಕೆ ಕಷ್ಟವಿದೆ

ಉಚಿತ ಗ್ಯಾರಂಟಿಗಳ ಬಗ್ಗೆ ನಮ್ಮ‌ ವಿರೋಧವಿಲ್ಲ. ಸ್ವಾತಂತ್ರ್ಯ ಬಂದು 50 ರಿಂದ 60 ವರ್ಷ ಸರ್ಕಾರ ನಡೆಸಿದೆ. ರೈತರು ಎರಡು ತುತ್ತು ಅನ್ನ ತಿನ್ನುವುದಕ್ಕೂ ಕಷ್ಟಪಡಬೇಕಿದೆ. ರೈತರು ಇವತ್ತಿಗೂ ಬಡವರಾಗಿಯೇ ಇದ್ದಾರೆ. ಅವರ ಪಾಲಿಗೆ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ..? ಕಳೆದ ಎಂಟರಿಂದ ಒಂಭತ್ತು ತಿಂಗಳಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಚಾಟಿ ಬೀಸಿದರು.

Exit mobile version