Site icon PowerTV

ದೇವರ ಹೆಸರೇಳಿ ದುಡ್ಡೊಡೆಯುವ ಕೆಲಸ ಆಗಿದೆ : ಶಿವರಾಜ್ ತಂಗಡಗಿ

ಬೆಂಗಳೂರು : ಪರಶುರಾಮನ ಮೇಲೆ ಆ ಊರಿನ ಭಾಗದ ಜನರಿಗೆ ತುಂಬಾ ನಂಬಿಕೆ ಇದೆ. ದೇವರ ಹೆಸರೇಳಿ ದುಡ್ಡು ಹೊಡೆಯುವ ಕೆಲಸ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದರು.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿ ಆದ ಎಡವಟ್ಟನ್ನ, ನಮ್ಮ ಸರ್ಕಾರದಲ್ಲಿ ತಡೆದಿದ್ದೇವೆ. ಆ ಊರಿನ ಯುವಕರು ದೂರು ನೀಡಿದ್ದರು. ಅರ್ಧ ಭಾಗ ಕಂಚು, ಅರ್ಧ ಭಾಗ ಫೈಬರ್‌ನದ್ದಾಗಿತ್ತು. ಮಳೆ ಬಂದಾಗ ಅದು ಕಂಡು ಬಂತು ಎಂದು ತಿಳಿಸಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಬಿಜೆಪಿ ಸದಸ್ಯರು, ತನಿಖೆಗೆ ನೀಡಿ. ಪೇಪರ್‌ನಲ್ಲಿರೋ ಬಗ್ಗೆ ಹೇಳಬೇಡಿ. ನೀವೇ ತೀರ್ಮಾನ ಮಾಡಬೇಡಿ. ತನಿಖೆ ಮಾಡಿಸಿ ಎಂದು ಆಗ್ರಹ ಮಾಡಿದರು. ಇದು ಬಿಜೆಪಿ ಕಾಲದಲ್ಲಿ ಆದ ಹಗರಣ. ನಾನು ತೀರ್ಪು ನೀಡುತ್ತಿಲ್ಲ ಎಂದು ತಂಗಡಗಿ ಹೇಳಿದರು. ಆಗ, ಹಾ.. ಅಷ್ಟು ಹೇಳಿ ಸಾಕು ಎಂದು ಬಿಜೆಪಿ ಸದಸ್ಯರು ಹೇಳಿದರು.

ಮಂಗಳೂರು ಭಾಗದವರು ಬಹಳ‌ ದೈವ ಭಕ್ತರು

ಮಂಗಳೂರು ಭಾಗದವರು ಬಹಳ‌ ದೈವ ಭಕ್ತರು. ಅದನ್ನ ನಾವು ನೋಡಿದ್ದೇವೆ. ನಮ್ಮ ಸಿಎಂ ಸಿಐಡಿ ತನಿಖೆಗೆ ನೀಡಬೇಕು ಅಂತ ನಿರ್ಧಾರ ಮಾಡಿದ್ದಾರೆ. ಸಿಐಡಿ ತನಿಖೆ ಮಾಡಿಸೇ ಮಾಡಿಸುತ್ತೇವೆ. ನಿಜವಾದ ಕಳ್ಳರು ಯಾರು ಅಂತ ಹೊರಗೆ ತರುತ್ತೇವೆ. ಕೆಳಗೆ ಕಂಚು, ಮೇಲೆ ಫೈಬರ್ ಇಟ್ಟ ಕಂಟ್ರಾಕ್ಟರ್ ವಿಚಾರಣೆ ಮಾಡುತ್ತೇವೆ. ನಿಜವಾದ ಕಳ್ಳರಿಗೆ ಶಿಕ್ಷೆ ಕೊಡಿಸುತ್ತೇವೆ ಎಂದು ಸಚಿವ ಶಿವರಾಜ್‌ ತಂಗಡಗಿ ತಿಳಿಸಿದರು.

Exit mobile version