Site icon PowerTV

ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅವರೇ ಗೆಲ್ಲಿಸಿಕೊಳ್ಳಲಿ : ಡಿಕೆಶಿಗೆ ರಾಜಣ್ಣ ಸವಾಲ್

ಬೆಂಗಳೂರು : ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಕಾಂಗ್ರೆಸ್ ಸೇರ್ಪಡೆಗೆ ಡಿ.ಕೆ. ಶಿವಕುಮಾರ್ ವಿರೋಧ ವಿಚಾರದ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುದ್ದಹನುಮೇಗೌಡರಿಗೆ ಟಿಕೆಟ್ ಕೊಟ್ಟರೆ ನಾವು ಗೆಲ್ಲಿಸಿಕೊಂಡು ಬರ್ತೇವೆ ಎಂದು ಹೇಳಿದ್ದಾರೆ.

ಮುದ್ದಹನುಮೇಗೌಡರಿಗೆ ಕಾಂಗ್ರೆಸ್​ನಿಂದ ಟಿಕೆಟ್ ಕೊಟ್ಟರೆ ಗೆಲುವು ನಿಶ್ಚಿತ. ನಾವು ಗೆಲ್ಲಿಸಿಕೊಂಡು ಬರ್ತೇವೆ ಅಂತ ಹೇಳಿದ್ದೇವೆ. ಆದರೆ, ಅವರನ್ನ ಪಕ್ಷದ ಅಧ್ಯಕ್ಷರು ಸೇರಿಸಿಕೊಳ್ಳುತ್ತಿಲ್ಲ ಎಂಬ ಭಾವನೆ ಜನರಲ್ಲಿ ಬಂದಿದೆ. ನಾವು ಹೇಳಿದವರಿಗೆ ಕೊಡುವುದಾದರೆ ಟಿಕೆಟ್ ಕೊಡಲಿ. ಅದನ್ನ ಬಿಟ್ಟು ಬೇರೆಯವರಿಗೆ ಕೊಟ್ಟರೆ ಅವರೇ ಗೆಲ್ಲಿಸಿಕೊಳ್ಳಲಿ ಎಂದು ಪರೋಕ್ಷವಾಗಿ ಡಿ.ಕೆ. ಶಿವಕುಮಾರ್​ ಅವರಿಗೆ ಸವಾಲು ಹಾಕಿದ್ದಾರೆ.

ಕುಮಾರಸ್ವಾಮಿಗೆ ರಾಜಣ್ಣ ತಿರುಗೇಟು

ವಸೂಲಿ ಮಾಡಿಕೊಡೋರಿಗೆಲ್ಲಾ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿ, ಮೊದಲೆಲ್ಲಾ ಜಾತ್ಯಾತೀತ ಅಂತ ಹೇಳ್ತಾ ಇದ್ದರು. ಅವರು ಕಾಂಗ್ರೆಸ್, ಬಿಜೆಪಿ ಜೊತೆ ಸರ್ಕಾರ ಮಾಡಿದ್ರು. ಅವ್ರ ಅನುಭವದ ಮೇಲೆ ಹೇಳ್ತಾ ಇದ್ದಾರೆ ಎಂದು ಕೆ.ಎನ್. ರಾಜಣ್ಣ ತಿರುಗೇಟು ಕೊಟ್ಟಿದ್ದಾರೆ.

Exit mobile version