Site icon PowerTV

ಹೋರಿ ಹಬ್ಬ: ಗೂಳಿ ತಿವಿತಕ್ಕೆ ಯುವಕ ಬಲಿ

ಶಿವಮೊಗ್ಗ: ಹೋರಿ ಹಬ್ಬದಲ್ಲಿ ಗೂಳಿ ತಿವಿತಕ್ಕೆ ಯುವಕ ಬಲಿಯಾಗಿರುವ ಘಟನೆ ನಡೆದಿದೆ.

ಹೌದು,ಹೋರಿ ಬೆದರಿಸುವ ಹಬ್ಬ ದೊಡ್ಡ ಸಂಭ್ರಮವೇ ಆದರೂ ಆಗಾಗ ಅಪಾಯಕಾರಿಯಾಗಿ ಬದಲಾಗುವುದೂ ಇದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಂಭವಿಸಿದ ಯುವಕನ ಸಾವು  ಇದಕ್ಕೆ ಒಂದು ನಿದರ್ಶನವಾಗಿದೆ.

ಕಲ್ಮನೆ ಗ್ರಾಮದಲ್ಲಿ ಭಾನುವಾರ ಆಯೋಜನೆಯಾಗಿದ್ದಾಗ ಹೋರಿ ಬೆದರಿಸುವ ಸ್ಪರ್ಧೆಯನ್ನು ನೋಡಲು ಹೋಗಿದ್ದ ಯುವಕನಿಗೆ ಹೋರಿ ತಿವಿದು ಗಾಯಗೊಳಿಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಪುನೀತ್ ಆಚಾರ್ (19) ಚಿಕಿತ್ಸೆ ಫಲಿಸದೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ.

ಪುನೀತ್‌ ಆಚಾರ್‌ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿಯಾಗಿದ್ದು, ಗೆಳೆಯರೊಂದಿಗೆ ಉತ್ಸಾಹದಿಂದ ಸ್ಪರ್ಧೆ ನೋಡಲು ಬಂದಿದ್ದ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version