Site icon PowerTV

ರಾಹುಲ್ ಗಾಂಧಿ ಯಾವ ಜಾತಿ? ಮಿಶ್ರತಳಿನಾ ಅಥವಾ ಬೆರಕೆನಾ? : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿಲ್ಲ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿರುಗೇಟು ಕೊಟ್ಟಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಯಾವ ಜಾತಿ? ಮಿಶ್ರತಳಿನಾ ಅಥವಾ ಬೆರಕೆನಾ..? ಎಂದು ಕುಟುಕಿದ್ದಾರೆ.

ನರೇಂದ್ರ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಾರೆ. ರಾಹುಲ್ ಗಾಂಧಿಗೆ ಎಷ್ಟು ಜ್ಞಾನ ಇದೆ ಎನ್ನುವುದನ್ನು ಪರೀಕ್ಷೆ ಮಾಡಬೇಕಿದೆ. ಕಾಂಗ್ರೆಸ್ ನಾಯಕರೇ ರಾಹುಲ್ ಗಾಂಧಿಯವರಿಗೆ ಒಂದು ಕ್ಲಾಸ್ ತಗೊಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಮೋದಿ ಇಡೀ ಪ್ರಪಂಚದ ನಾಯಕ

ಇಡೀ ಪ್ರಪಂಚದ ನಾಯಕ ನರೇಂದ್ರ ಮೋದಿ. ದೇಶದ ಜನ ಪ್ರಧಾನಿ ಮೋದಿಯವರ ಜಾತಿ ನೋಡಿಲ್ಲ. ರಾಹುಲ್ ಗಾಂಧಿ ನೀವು ಯಾವ ಜಾತಿ..? ಮಿಶ್ರತಳಿ, ಬೆರಕೆನಾ? ಎಂದು ನಾನು ಕೇಳುತ್ತಿಲ್ಲ. ದೇಶದ ಸಾರ್ವಜನಿಕರು ಹೇಳುತ್ತಿದ್ದಾರೆ. ನಿನ್ನ ಜಾತಿ ಯಾವುದು ಎಂದು ದೇಶದ ಜನಕ್ಕೆ ನೀವು ಹೇಳಬೇಕು ಎಂದು ಛೇಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಪ್ರಧಾನಿ ಮೋದಿ ತೇಲಿ ಜಾತಿಯವರು, ನಿತ್ಯ 5 ಬಾರಿ ಬಟ್ಟೆ ಬದಲಿಸುತ್ತಾರೆ : ರಾಹುಲ್ ಗಾಂಧಿ

ರಾಹುಲ್ ಗಾಂಧಿನಾ ಪಕ್ಷದಿಂದ ಕಿತ್ತು ಬಿಸಾಕಿ

ನಿಮ್ಮಜ್ಜಿ ಇಂದಿರಾಗಾಂಧಿ, ನಿಮ್ಮಜ್ಜ ಪಿರೋಜ್ ಖಾನ್. ಹಾಗಾದರೆ, ನಿಮ್ಮ ಜಾತಿ ಯಾವುದು ರಾಹುಲ್ ಗಾಂಧಿಯವರೇ..? ದೇಶದ ಜನರ ಮುಂದೆ ರಾಹುಲ್ ಗಾಂಧಿಯವರು ಕ್ಷಮೆ ಕೇಳಬೇಕು. ರಾಹುಲ್ ಗಾಂಧಿಯವರನ್ನು ಕಾಂಗ್ರೆಸ್​ ಪಕ್ಷದಿಂದ ಕಿತ್ತು ಬಿಸಾಕಿ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

Exit mobile version