Site icon PowerTV

ಜೀವನದಲ್ಲಿ ಜಿಗುಪ್ಸೆ: ನದಿಗೆ ಹಾರಿ ತಾಯಿ-ಮಗಳು ಆತ್ಮಹತ್ಯೆ

ಕಲಬುರಗಿ: ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ ಮಗಳು ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಹಬಾದ್ ಬಳಿ ನಡೆದಿದೆ.

ಸುಮಲತಾ( 45) ಹಾಗೂ ವರ್ಷಾ( 22) ಆತ್ಮಹತ್ಯೆ ಮಾಡಿಕೊಂಡ ದುರ್ವೈವಿ. ಇವರು ಕಲಬುರಗಿ ಜಿಲ್ಲೆಯ MB ನಗರ ಬಡಾವಣೆ ನಿವಾಸಿಳಾಗಿದ್ದಾರೆ.

ತಾಯಿ ಮಗಳು ನಿನ್ನೆ ಸಾಯಂಕಾಲದಿಂದ ನಾಪತ್ತೆಯಾಗಿದ್ದ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ  ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಶಹಬಾದ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದ್ದು, ಪ್ರಕರಣ ದಾಖಲಾಗಿದೆ.

Exit mobile version