Site icon PowerTV

ಈ ಕಂದನ ಸಾವಿಗೆ ಯಾರು ಹೊಣೆ? : ಚುಚ್ಚುಮದ್ದು ಬಳಿಕ ಒಂದುವರೆ ತಿಂಗಳ ಮಗು ಸಾವು

ರಾಮನಗರ : ವೈದ್ಯರ ನಿರ್ಲಕ್ಷ್ಯಕ್ಕೆ ಚುಚ್ಚುಮದ್ದು ಪಡೆದ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಭೈರಾಪಟ್ಟಣದಲ್ಲಿ ನಡೆದಿದೆ.

ಸ್ಪೂರ್ತಿ ಮತ್ತು ಮೋಹನ್ ದಂಪತಿಯ ಒಂದುವರೆ ತಿಂಗಳ ಮಗು ಸಾವನ್ನಪ್ಪಿದೆ. ಇಂದು ಬೆಳಗ್ಗೆ ದೊಡ್ಡಮಳೂರು ಗ್ರಾಮದಲ್ಲಿ ಪೋಷಕರು ಮಗುವಿಗೆ ಪಿಟಿಟಿ ವ್ಯಾಕ್ಸಿನ್ ಹಾಕಿಸಿದ್ದರು.

ವ್ಯಾಕ್ಸಿನ್ ಹಾಕಿದ ಒಂದು ಗಂಟೆ ಬಳಿಕ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಪೋಷಕರು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿದೆ.

ಈ ಸುದ್ದಿ ಓದಿದ್ದೀರಾ? : ಪಾರ್ಕ್‌ನಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿದ ಮಗು!

ಸೂಕ್ತ ರೀತಿಯಲ್ಲಿ ಮಗು ತಪಾಸಣೆ ಮಾಡದೇ ಮಗುವಿಗೆ ವ್ಯಾಕ್ಸಿನ್ ಹಾಕಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇತ್ತ, ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇನ್ನು, ಇಂದು ಅದೇ ಗ್ರಾಮದಲ್ಲಿ 18 ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಿದ್ದು, 18 ಮಕ್ಕಳ ಪೈಕಿ 17 ಮಕ್ಕಳೂ ಆರೋಗ್ಯವಾಗಿದ್ದಾರೆ.

Exit mobile version