Site icon PowerTV

ಮೋದಿ ಕಟೌಟ್ ತಬ್ಬಿಕೊಂಡು ಮಹಿಳೆ ಡ್ಯಾನ್ಸ್

ಬೆಂಗಳೂರು : ಇನ್‌ಸ್ಟಾಗ್ರಾಮ್ ರೀಲ್ ಮಾಡುವಾಗ ಮಹಿಳೆಯೊಬ್ಬರು ಸೆಲ್ಫಿ ಪಾಯಿಂಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಟೌಟ್‌ನೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ಇಡೀ ದೇಶದ ರೈಲ್ವೆ ನಿಲ್ದಾಣಗಳು, ಪಡಿತರ ಅಂಗಡಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಕೇಂದ್ರ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳೊಂದಿಗೆ ಸೆಲ್ಫಿ ಪಾಯಿಂಟ್‌ಗಳನ್ನು ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಚಾರಕ್ಕಾಗಿ ಕಟೌಟ್‌ಗಳನ್ನು ಹಾಕಲಾಗಿದೆ.

ಜನರು ಪ್ರಧಾನಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಸರ್ಕಾರವು ವಿವಿಧ ಸ್ಥಳಗಳಲ್ಲಿ ಕಟೌಟ್‌ಗಳನ್ನು ಹಾಕಿದೆ. ಆದರೆ, ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಹಾಡೊಂದರಲ್ಲಿ ಮಹಿಳೆ ಪ್ರಧಾನಿಯವರ ಕಟೌಟ್‌ನೊಂದಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

ಸಾಂಗ್​ ಯಾವ ಚಿತ್ರದ್ದು?

ಸಂಜಯ್ ದತ್, ಜಾಕಿ ಶ್ರಾಫ್ ಹಾಗೂ ಮಾಧುರಿ ದೀಕ್ಷಿತ್ ನಟಿಸಿದ 1993ರ ಸೂಪರ್ ಹಿಟ್ ಚಲನಚಿತ್ರ ‘ಖಲ್ನಾಯಕ್’ ಹಾಡಿನ ‘ಆಜಾ ಸಜನ್ ಆಜಾ’ನಲ್ಲಿ ಮಹಿಳೆ ನೃತ್ಯ ಮಾಡುವುದನ್ನು ವಿಡಿಯೋ ಮಾಡಿದ್ದಾರೆ. ಹಾಡು ಪ್ಲೇ ಆಗುತ್ತಿದ್ದಂತೆ ಮಹಿಳೆ ಪ್ರಧಾನಿ ಮೋದಿಯವರ ಕಟೌಟ್‌ನತ್ತ ಓಡಿ ಅದನ್ನು ತಬ್ಬಿಕೊಳ್ಳುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ಅವರು ಕಟೌಟ್‌ನ ತಬ್ಬಿ ಡ್ಯಾನ್ಸ್​ ಮಾಡಿದ್ದಾರೆ.

Exit mobile version