Site icon PowerTV

20 ಸಾವಿರ ರೈತರಿಂದ ನಾಳೆ ‘ದೆಹಲಿ ಚಲೋ’!: ಪೊಲೀಸ್​ ಕಟ್ಟೆಚ್ಚರ

ದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಸುಮಾರು 200 ರೈತ ಸಂಘಟನೆಗಳು ನಾಳೆ ದೆಹಲಿ ಚಲೋಗೆ ಕರೆ ನೀಡಿವೆ.

‘ದೆಹಲಿ ಚಲೋ’ನಲ್ಲಿ ಸುಮಾರು 20,000 ರೈತರು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಹಲವು ಕಡೆ ಗಡಿಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಈ ಪ್ರತಿಭಟನೆಗೆ 200 ರೈತ ಸಂಘಟನೆಗಳು ಬೆಂಬಲ ನೀಡಿದ್ದು, ಸುಮಾರು 20,000 ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ವೃದ್ದನ ಮೇಲೆ ಬೀದಿ ನಾಯಿಗಳು ದಾಳಿ!

ಗಡಿಗಳಲ್ಲಿ ಕ್ರೇನ್ ಮತ್ತು ಕಂಟೇನರ್‌ಗಳನ್ನು ತಂದಿಡಲಾಗಿದ್ದು, ರೈತರು ದೆಗಲಿ ಪ್ರವೇಶ ಮಾಡಲು ಯತ್ನಿಸಿದ್ರೆ ಹೆದ್ದಾರಿಯನ್ನೇ ಬಂದ್ ಮಾಡಲು ಪೊಲೀಸರು ಯೋಜಿಸಿದ್ದಾರೆ. ಇದರೊಂದಿಗೆ ಯಾವುದೇ ಅನಾಹುತಕಾರಿ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಭದ್ರತೆಯನ್ನ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಆದ್ರೆ ಬ್ಯಾರಿಕೇಡ್‌ಗಳ ಅಸ್ತ್ರವನ್ನು ಭೇದಿಸಲು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನೇ ಹಿಟಾಚಿ ರೂಪಕ್ಕೆ ಪರಿವರ್ತಿಸಿದ್ದಾರೆ ಎಂದು ಹೇಳಲಾಗಿದೆ.

Exit mobile version