Site icon PowerTV

ಗಂಡ-ಹೆಂಡತಿ ಜಗಳ : ಪತಿಗೆ ಥಳಿಸಿ ಪತ್ನಿ ಎಳೆದೊಯ್ದು ಅತ್ಯಾಚಾರಗೈದ ಕಾಮುಕರು

ಕೊಪ್ಪಳ : ಹನುಮ‌ ಜನಿಸಿದ ನಾಡಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದೆ. 21 ವರ್ಷದ ವಿವಾಹಿತೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ಎರಡು ದಿನಗಳ ಬಳಿಕ ತಡವಾಗಿ ಬೆಳಕಿಗೆ ಬಂದಿದೆ.

ಇಡೀ ಭಾರತವೇ ಶ್ರೀರಾಮನ ಜಪ ಮಾಡ್ತಿದೆ. ಆದರೆ, ಇತ್ತ ರಾಮನ‌ ಭಂಟ ಹನುಮನ ನಾಡಿನಲ್ಲಿ ವಿವಾಹಿತ ಮಹಿಳೆ ಮೇಲೆ ಆರು ಜನ ಕಿರಾತಕರು ಅತ್ಯಾಚಾರ ಮಾಡಿರುವ ನೀಚ ಪ್ರಕರಣ ಬೆಳಕಿಗೆ ಬಂದಿದೆ.

ಮನೆ ಕೆಲಸ ಮಾಡಿಕೊಂಡಿದ್ದ ಬೆಂಗಳೂರಿನ ಗೊರಗುಂಟೆಪಾಳ್ಯದ ಸಂತ್ರಸ್ತೆ ಮೂರು ತಿಂಗಳ ಹಿಂದೆ ಕೊಪ್ಪಳದ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರದ ಮಂಜುನಾಥನ ಜೊತೆ ವಿವಾಹವಾಗಿದ್ದರು. ಆದರೆ, ಇಬ್ಬರ ನಡುವ ಆಗಾಗ ಜಗಳ ಆಗ್ತಿತ್ತು. ಪತಿ ಮಂಜುನಾಥ್​​ ತನ್ನೂರಿಗೆ ವಾಪಸ್ ಬಂದಿದ್ದ. ಗಂಡನನ್ನು ಹುಡುಕಿಕೊಂಡು ಫೆಬ್ರವರಿ 8ರ ರಾತ್ರಿ 9 ಗಂಟೆ ಸುಮಾರಿಗೆ ಮಹಿಳೆ ಗಂಗಾವತಿ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ.

ಉದ್ಯಾನದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಗಂಗಾವರಿಗೆ ಬಂದ ಪತಿ ಅಲ್ಲಿಯೂ ಜಗಳ ಮಾಡಿದ್ದ. ಇದನ್ನ ಗಮನಿಸಿದ ಅಲ್ಲೇ ಇದ್ದ ಆರು ಯುವಕರ ಗುಂಪು ಅಲ್ಲಿಗೆ ಬಂದಿದೆ. ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದೆ. ಹೆದರಿದ ಮಹಿಳೆ ಉದ್ಯಾನದ ಕಡೆ ಓಡಿ ಹೋಗಿದ್ದಾಳೆ. ಅಲ್ಲಿಗೆ ಬಂದ ಆರು ಮಂದಿಯಲ್ಲಿ ಲಿಂಗರಾಜ್​​​ ಎಂಬಾತ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ.

ಇವನೇ ಅತ್ಯಾಚಾರ ಮಾಡಿದ ಯುವಕ

ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ. ಅತ್ಯಾಚಾರ ಮಾಡಿದ ಯುವಕರ ತಂಡದಲ್ಲಿ ಗಂಗಾವತಿಯ ಲಿಂಗರಾಜ, ಮೌಲಾ ಹುಸೇನ್‌, ಶಿವಕುಮಾರ ಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ಎಂಬ ಆರು ಮಂದಿ ಇದ್ದರು. ಅವರಲ್ಲಿ ಲಿಂಗರಾಜ ಎಂಬಾತ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ಮಿಂಚಿನ ಕಾರ್ಯಾಚರಣೆ, ಆರು ಆರೋಪಿಗಳು ಅರೆಸ್ಟ್

ಮಹಿಳೆ ದೂರಿನ ಮೇರೆಗೆ ಗಂಗಾವತಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಘಟನೆಗೆ ಸಂಬಂಧಿಸಿದ ಎಲ್ಲ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರ ನಡೆಸಿದ ಆರೋಪಿ ಹಾಗೂ ಆತನಿಗೆ ಸಹಕಾರ ನೀಡಿದ ಆರು ಮಂದಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version