Site icon PowerTV

ಕುಮಾರಸ್ವಾಮಿ ನಿತ್ಯ ಒಂದೊಂದು ಬಣ್ಣ ಹಾಕ್ತಾರೆ, ಆ್ಯಕ್ಟಿಂಗ್ ಕೂಡಾ ಮಾಡ್ತಾರೆ : ಡಿ.ಕೆ. ಸುರೇಶ್

ರಾಮನಗರ : ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಂಸದ ಡಿ.ಕೆ. ಸುರೇಶ್​ ಕುಟುಕಿದ್ದಾರೆ.

ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಸ್ವಾಮಿ ಅವರು ದಿನವೂ ಒಂದೊಂದು ಬಣ್ಣ ಹಾಕುತ್ತಾರೆ. ಅವರು ನಿರ್ಮಾಪಕರು, ನಿರ್ದೇಶಕರು. ಈಗ ಬಣ್ಣ ಹಚ್ಚಿಕೊಂಡು ಆ್ಯಕ್ಟಿಂಗ್ ಕೂಡಾ ಮಾಡುತ್ತಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಬ್ರದರ್ಸ್​ ಗೂಂಡಾಗಳು, ಡಿಕೆಶಿ ಮತ್ತೆ ತಿಹಾರ್ ಜೈಲಿಗೆ ಹೋಗ್ತಾರೆ ಎಂಬ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಗರಂ ಆಗಿದ್ದಾರೆ. ಶೀಘ್ರದಲ್ಲೇ ಈಶ್ವರಪ್ಪ ಅವರನ್ನ ಮೀಟ್ ಮಾಡ್ತೀನಿ. ಆ ಮೇಲೆ ಮಾತನಾಡ್ತೀನಿ ಎಂದು ಹೇಳಿದ್ದಾರೆ.

ರಾಷ್ಟ್ರಪತಿಗಳು ಹೇಳಿದ್ದು ಸುಳ್ಳೆ ಅಲ್ವಾ..?

ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರು ಸುಳ್ಳು ಹೇಳಿದ್ದಾರೆ ಅಂದ್ರೆ, ರಾಷ್ಟ್ರಪತಿಗಳು ಹೇಳಿದ್ದು ಸುಳ್ಳೆ ಅಲ್ವಾ..? ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೂ ಸಂಪೂರ್ಣ ಸುಳ್ಳು. ನಿರ್ಮಲಾ ಸೀತಾರಾಮನ್ ಹೇಳಿದ್ದೂ ಸುಳ್ಳು. ರಾಜ್ಯಪಾಲರ ಭಾಷಣ ಸುಳ್ಳು ಎನ್ನುವವರು ರಾಜ್ಯದ ಪಾಲನ್ನು ಕೊಡಿಸಿ. ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸುಳ್ಳಾ..? ಎಂದು ಬಿಜೆಪಿ ನಾಯಕರಿಗೆ ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.

Exit mobile version