Site icon PowerTV

ನಿಮ್ಮ ಪ್ರೀತಿಗೆ ಈ ‘ದಾಸ’ ಸದಾ ಆಭಾರಿ : ನಟ ದರ್ಶನ್ ಟ್ವೀಟ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ತಮ್ಮ ಮುಂದಿನ ಚಿತ್ರ ‘ಡೆವಿಲ್ ದಿ ಹಿರೋ’ ದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕುರಿತು ಪೋಸ್ಟ್​ ಮಾಡಿರುವ ಅವರು, ನಮ್ಮ ಮುಂದಿನ ಚಿತ್ರ ‘ಡೆವಿಲ್ ದಿ ಹಿರೋ’ ಸಿನಿಮಾದ ಟೀಸರ್ ಫೆಬ್ರವರಿ 15ರ ರಾತ್ರಿ 11.59ಕ್ಕೆ ಬಿಡುಗಡೆ ಆಗಲಿದೆ, ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಈ ದಾಸ ಸದಾ ಆಭಾರಿಯಾಗಿರುತ್ತಾನೆ ಎಂದು ತಿಳಿಸಿದ್ದಾರೆ.

ಅಲ್ಲದೆ, ‘ಡೆವಿಲ್ ದಿ ಹಿರೋ’ ಚಿತ್ರದ ಟೈಟಲ್ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ಇನ್ನೂ ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ.

ಚಿತ್ರರಂಗದಲ್ಲಿ ಯಶಸ್ವಿ 25 ವರ್ಷ ಪೂರೈಕೆ

ಚಿತ್ರರಂಗದಲ್ಲಿ ಯಶಸ್ವಿ 25 ವರ್ಷ ಪೂರೈಸಿರೋ ದರ್ಶನ್​ಗೆ ಫ್ಯಾನ್ಸ್ ಹಾಗೂ ಹಿತೈಷಿಗಳು ಸೇರಿಕೊಂಡು ಶ್ರೀರಂಗಪಟ್ಟಣದಲ್ಲಿನ ಬೃಹತ್ ಗ್ರೌಂಡ್​ನಲ್ಲಿ ‘ಬೆಳ್ಳಿ ಪರ್ವ’ ಕಾರ್ಯಕ್ರಮ ಮಾಡುತ್ತಿದ್ದಾರೆ. ಬರ್ತ್ ಡೇ ಆದ ಮಾರನೆ ದಿನ ಅಂದ್ರೆ ಫೆ.17ರ ಸಂಜೆ ಈ ಫಂಕ್ಷನ್ ನಡೆಯಲಿದ್ದು, ಇಡೀ ಡಿ ಭಕ್ತಗಣಕ್ಕೆ ಇದೊಂದು ಹಬ್ಬದ ಸಂಭ್ರಮದಂತೆ ಖುಷಿ ಕೊಡಲಿದೆ.

Exit mobile version