Site icon PowerTV

ನಿರ್ಮಲಾ ಸೀತಾರಾಮನ್ ವಿರುದ್ಧ ಪರಮೇಶ್ವರ್ ವಾಗ್ದಾಳಿ!

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ವಿರುದ್ಧ ಗೃಹ ಸಚಿವ ಡಾ. ಜಿ ಪರಮೇಶ್ವರ್​ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್​​​ನಲ್ಲಿ ಹಣಕಾಸು ಸಚಿವೆ ಎಲ್ಲಾ ಅನುದಾನ ಕೊಟ್ಟಿದ್ದೀವಿ. ಕೊಡೋದು ಏನೂ ಇಲ್ಲ ಅಂದಿದ್ದಾರೆ. ಕೇಂದ್ರ ಹಣಕಾಸು ಸಚಿವರೇ ಸುಳ್ಳು ಹೇಳೋದ್ಯಾಕೆ?. NDRF ನಿಂದ ಒಂದು ರೂಪಾಯಿ ಬಂದಿಲ್ಲ. ಕೇಂದ್ರ ತಂಡ ಬಂದು ನೋಡಿಕೊಂಡು ಹೋಗಿ ವರದಿ ಕೊಟ್ಟಿದ್ದಾರೆ. ಅದರೂ ಅದಕ್ಕೆ ಅನುದಾನ ನೀಡಿಲ್ಲಾ ಯಾಕೆ ಅಂತಾ ದೊಡ್ಡ ಸುಳ್ಳು ಹೇಳ್ತಾ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಂಚಾರಿ ನಿಯಮ ಉಲ್ಲಂಘನೆ :30 ಸಾವಿರದ ಸ್ಕೂಟರ್​ಗೆ ₹3 ಲಕ್ಷ ಟ್ರಾಫಿಕ್​​​ ದಂಡ!

ಇನ್ನು ಅಮಿತ್ ಶಾ ಮೈಸೂರಿಗೆ ಬಂದಿದ್ದಾರೆ. ಏನ್ ಹೇಳ್ತಾರೋ ನೋಡಬೇಕು. ಮಾಜಿ ಪ್ರಧಾನಿ ದೇವೇಗೌಡರಿಗೆ ಮಾಹಿತಿ ಇರಬಹುದು, ಇರದೇಯೂ ಇರಬಹುದು. ರಾಜ್ಯ ಸರ್ಕಾರ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿರುವುದು ನಮ್ಮದು ಜವಾಬ್ದಾರಿಯುತ ಸರ್ಕಾರವಲ್ಲವಾ ? ಎಂದು ಪ್ರಶ್ನಿಸಿದ್ದಾರೆ.

Exit mobile version