Site icon PowerTV

ಈ ಸಲ ಡಿಕೆಶಿದೇ ಸೆಟ್ಲಮೆಂಟ್ ಆಗಲಿದೆ : ಶಾಸಕ ಯತ್ನಾಳ್

ಹಾವೇರಿ : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಪರೇಶನ್ ಕಮಲ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಆಪರೇಶನ್ ಮಾಡೋದು ಬೇಕಿಲ್ಲ. ಒಮ್ಮೊಮ್ಮೆ ಆಪರೇಶನ್ ಆಗದೇ ಅವೇ ಅಬಾಷನ್ ಆಗುತ್ತವೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್​ನಲ್ಲಿ ಅಸಮಾಧಾನ ಇದೆ. ಸಿಎಂ ಸಿದ್ದರಾಮಯ್ಯರನ್ನು ಇಳಿಸಲು ಕಾಂಗ್ರೆಸ್​ನಿಂದ ಒಂದು ಗುಂಪು ಹೊರಗೆ ಬರಬಹುದು. ಡಿ.ಕೆ ಶಿವಕುಮಾರ್ ಸಿಎಂ ಮಾಡಿದರೆ ರಾಜ್ಯದ ಗತಿ ಏನು ಅಂತ ನಮಗೆ ಭಯ ಇದೆ. ಡಿ.ಕೆ ಶಿವಕುಮಾರ್ ಯಾರ ಯಾರ ಸೆಟ್ಲಮೆಂಟ್ ಮಾಡ್ತಾನೋ? ಏನೋ..? ಈ ಸಲ ಡಿಕೆಶಿದೇ ಸೆಟ್ಲಮೆಂಟ್ ಆಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿದ್ದು, ಖರ್ಗೆ ಸೆಟ್ಲಮೆಂಟ್ ಗಿರಾಕಿದೂ ಗುಂಪಿದೆ

ಎಲ್ಲರದೂ ಒಂದೊಂದು ಗುಂಪಿದೆ. ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸೆಟ್ಲಮೆಂಟ್ ಗಿರಾಕಿದೂ (ಡಿ.ಕೆ ಶಿವಕುಮಾರ್) ಗುಂಪಿದೆ. ಎಲ್ಲರೂ ನಾಲ್ಕು ಐದು ಶಾಸಕರನ್ನು ತಗೊಂಡು ಇಟ್ಟಿದಾರೆ. ಚುನಾವಣೆಯಲ್ಲಿ ನಾವೇನು ಬೇರೆಯವರಿಗೆ ವೋಟು ಹಾಕು ಅಂತ ಹೇಳಲ್ಲ. ಅವರನ್ನು ಕೇಳಿ ಯಾರು ಯಾರಿಗೆ ವೋಟು ಹಾಕಬೇಡಿ ಎಂದು ಶಾಸಕ ಯತ್ನಾಳ್ ಹೇಳಿದ್ದಾರೆ.

Exit mobile version