Site icon PowerTV

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ರಾಜ್ಯದಲ್ಲಿ ಅಚ್ಚರಿ ಆಯ್ಕೆ

ನವದೆಹಲಿ : ರಾಜ್ಯಸಭೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿ ಹೈಕಮಾಂಡ್ ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣ ಕೃಷ್ಣಸಾ ಭಾಂಡಗೆಗೆ ಮಣೆ ಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ಏಳು ಮಂದಿ ಹಾಗೂ ಬಿಹಾರದಲ್ಲಿ ಇಬ್ಬರಿಗೆ ಟಿಕೆಟ್ ಘೋಷಿಸಲಾಗಿದೆ.

ಬಿಹಾರದಲ್ಲಿ ಡಾ. ಧರ್ಮಶೀಲಾ ಗುಪ್ತಾ ಹಾಗೂ ಭೀಮಸಿಂಗ್, ಛತ್ತಿಸಗಢದಲ್ಲಿ ದೇವೇಂದ್ರ ಪ್ರತಾಪ್ ಸಿಂಗ್​ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಹರಿಯಾಣದಲ್ಲಿ ಸುಭಾಷ ಬರಲಾ, ಉತ್ತರ ಪ್ರದೇಶದಲ್ಲಿ ಆರ್​.ಪಿ.ಎನ್​ ಸಿಂಗ್, ಡಾ. ಸುಧಾಂಶು, ಚೌಧರಿ ತೇಜವೀರ್, ಸಾಧನಾ ಸಿಂಗ್, ಅಮರ್ಪಾಲ್, ಡಾ. ಸಂಗೀತಾ, ನವೀನ ಜೈನ್, ಉತ್ತರಖಂಡದಲ್ಲಿ ಮಹೇಂದ್ರ ಭಟ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಸಮಿಕ್ ಭಟ್ಟಾಚಾರ್ಯ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

Exit mobile version