ಬೆಂಗಳೂರು : ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ..’ ಎನ್ನುವಂತೆ ಹಿರಿಯರ ಬಳಿಕ ಇದೀಗ ಕಿರಿಯರು ಸಹ ಕೋಟ್ಯಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸು ಛಿದ್ರ ಛಿದ್ರ ಮಾಡಿದ್ದಾರೆ.
ಐಸಿಸಿ ಅಂಡರ್-19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಭಾರತ 79 ರನ್ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ಭಾರತ ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿದೆ.
WTC 23 ಮತ್ತು CWC 23 ನಂತರ, ಆಸ್ಟ್ರೇಲಿಯಾ U19 ವಿಶ್ವಕಪ್ 2024 ನೊಂದಿಗೆ ಹ್ಯಾಟ್ರಿಕ್ ಪೂರ್ಣಗೊಳಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಸಚಿನ್, ಅರ್ಶಿನ್, ಉದಯ್ ನಿರಾಸೆ
ಆಸ್ಟ್ರೇಲಿಯಾ ನೀಡಿದ್ದ 254 ರನ್ಗಳ ಸವಾಲಿನ ಟಾರ್ಗೆಟ್ ಬೆನ್ನತ್ತಿದ ಭಾರತ 43.5 ಓವರ್ಗಳಲ್ಲಿ 174 ರನ್ಗಳಿಗೆ ಆಲೌಟ್ ಆಯಿತು. ಇ್ನನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಿಸಿತು. ಅರ್ಶಿನ್ ಕುಲಕರ್ಣಿ ಕೇವಲ 3 ರನ್ಗೆ ಔಟಾದರು. ನಾಯಕ ಉದಯ್ ಸಹರನ್ 8, ಸಚಿನ್ ದಾಸ್ ಹಾಗೂ ಪ್ರಿಯಾಂಶು ಮೊಲಿಯಾ 9 ರನ್ಗೆ ಔಟಾಗಿ ನಿರಾಸೆ ಮೂಡಿಸಿದರು. ಅರವೆಲ್ಲಿ ಅವನೀಶ್ ಹಾಗೂ ರಾಜ್ ಲಿಂಬಾನಿ ಸೊನ್ನೆ (0) ಸುತ್ತಿ ಬಂದ ಹಾದಿಯಲ್ಲೇ ಹಿಂದಿರುಗಿದರು.
ಆದರ್ಶ್ ಸಿಂಗ್ 47, ಮುರುಗನ್ ಅಭಿಷೇಕ್ 42
ಆರಂಭಿಕ ಆಟಗಾರ ಆದರ್ಶ್ ಸಿಂಗ್ 47, ಮುರುಗನ್ ಅಭಿಷೇಕ್ 42, ಮುಶೀರ್ ಖಾನ್ 22, ರನ್ ಗಳಿಸಿದ್ದೇ ಭಾರತದ ಪರ ಅತ್ಯಧಿಕ ಸ್ಕೋರ್. ಉಳಿದ ಯಾವೊಬ್ಬ ಬ್ಯಾಟರ್ ಸಹ ಆಸಿಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ. ಆಸ್ಟ್ರೇಲಿಯಾ ಪರ ಬಿಯರ್ಡ್ಮನ್ ಹಾಗೂ ಮ್ಯಾಕ್ಮಿಲನ್ ತಲಾ 3, ವಿಡ್ಲರ್ 2 ಹಾಗೂ ಆಂಡರ್ಸನ್ ಒಂದು ವಿಕೆಟ್ ಪಡೆದರು.
????????? ?
After #WTC23 and #CWC23, Australia complete the hat-trick with #U19WorldCup 2024 ? pic.twitter.com/Y6cmaLOTu0
— ICC (@ICC) February 11, 2024