Site icon PowerTV

ಡಿ.ಕೆ.ಸುರೇಶ್ ಹೇಳಿಕೆ ನಾವು ಸಮರ್ಥನೆ ಮಾಡಲ್ಲ: ಸಚಿವ ಕೆ.ಎನ್ ರಾಜಣ್ಣ

ಹಾವೇರಿ: ದೇಶ ವಿಭಜನೆ ಕುರಿತು ಸಂಸದ ಡಿಕೆ ಸುರೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್​.ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ದೇಶ ಒಗ್ಗಟ್ಟಾಗಿ ಇರಬೇಕು ಅಂತ ರಾಜೀವ್ ಗಾಂಧಿ ಜೀವ ತ್ಯಾಗ ಮಾಡಿದ್ರು. ಆಪರೇಷನ್ ಬ್ಲು ಸ್ಟಾರ್ ಮಾಡಿದ್ದು ಯಾರು? ಆಪರೇಷನ್ ಬ್ಲು ಸ್ಟಾರ್ ಮಾಡದಿದ್ದರೆ ಪಂಜಾಬ್ ರಾಜ್ಯ ನಮ್ಮಲ್ಲಿ ಇರ್ತಾ ಇರಲಿಲ್ಲ. ಅದಕ್ಕಾಗಿ ಇಂದಿರಾಗಾಂಧಿ ಹತ್ಯೆ ಆಯಿತು. ದೇಶಕ್ಕೋಸ್ಕರ ಬಿಜೆಪಿಯವರ ಕೊಡುಗೆ ಏನು? ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಗುಂಡಿನ ಬೆದರಿಕೆಗೆ ಹೆದರುವ ರಕ್ತ ಡಿ.ಕೆ. ಸುರೇಶ್ ಮೈಯಲ್ಲಿ ಹರಿಯುತ್ತಿಲ್ಲ, ನಮ್ಮ ಸುದ್ದಿಗೆ ಬಂದವರ ಸೆಟ್ಲಮೆಂಟ್ ಆಗಿದೆ

ಡಿಕೆ ಸುರೇಶ್ ಹೇಳಿಕೆಯನ್ನು ನಾವು ಸಮರ್ಥನೆ ಮಾಡಲ್ಲ. ದೇಶ ಒಗ್ಗಟ್ಟಿಗೋಸ್ಕರ ನಮ್ಮ ಕಾಂಗ್ರೆಸ್ ಮುಖಂಡರು ತ್ಯಾಗ ಬಲಿದಾನ ಮಾಡಿದ್ದಾರೆ ಅದು ಉಳಿಯಬೇಕು, ವ್ಯರ್ಥ ಆಗಬಾರದು. ದೇಶದ ಒಗ್ಗಟ್ಟಿಗೆ ಕೆಡಕುಂಟು ಮಾಡುವ ಮಾತು ಯಾರೇ ಆಡಿದ್ರೂ ಅದನ್ನ ನಾವು ಖಂಡಿಸ್ತೇವೆ. ದೇಶದ ವಿಭಜನೆಗೆ ಪೂರಕವಾದ ಮಾತು ಯಾರೇ ಹೇಳಿದರೂ ಅದನ್ನ ನಾವು ಖಂಡಿಸ್ತೇವೆ ಎಂದ್ರು.

Exit mobile version