Site icon PowerTV

ಕಾರ್‌ ಟಚ್‌ ಆಗಿದ್ದಕ್ಕೆ ಗಲಾಟೆ: ಪ್ಯಾಂಟ್‌ ಬಿಚ್ಚಿ ಕ್ಯಾಬ್‌ ಡ್ರೈವರ್ ವಿಕೃತಿ

ಬೆಂಗಳೂರು: ರೋಡ್ ರೇಜ್ ಪ್ರಕರಣಗಳು ದಿನೇ ದಿನೇ ಬೆಂಗಳೂರಿನಲ್ಲಿ ಹೆಚ್ಚಾಗ್ತನೇ ಇವೆ. ರೋಡ್ ರೇಜ್ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ಮೇಲೆ ರೌಡಿಶೀಟರ್ ಓಪನ್ ಮಾಡುವ ವಾರ್ನಿಂಗ್ ನೀಡಿದ್ದರೂ ಸಹ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆ ಆಗ್ತಿಲ್ಲ.

ಹೌದು, ನಿನ್ನೆ ರಾತ್ರಿ ನಗರದ ಹೆಬ್ಬಾಳ ಸಿಗ್ನಲ್ ಬಳಿ ಎರಡು ಕಾರುಗಳ ನಡುವೆ ಟಚ್ ಆಗಿತ್ತು. ಈ ವೇಳೆ ಕಾರಿನಿಂದ ಕೆಳಗೆ ಇಳಿದ ಕ್ಯಾಬ್ ಡ್ರೈವರ್ , ಮತ್ತೊಂದು ಕಾರಿನಲ್ಲಿದ್ದವರ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾಗಿದ್ದಾನೆ.ಅಷ್ಟೇ ಅಲ್ಲದೇ ಕಾರಿನಲ್ಲಿದ್ದ ಫ್ಯಾಮಿಲಿ ಮುಂದೆಯೇ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ.

ಚಾಲಕನ ವರ್ತನೆ ವಿರುದ್ಧ ಇತರೆ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಸಭ್ಯ ವರ್ತನೆಯ ವೀಡಿಯೋಗಳನ್ನು ತೆಗೆದ ದೂರುದಾರ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಯುತ್ತಿದೆ.

Exit mobile version