Site icon PowerTV

ಹಿಂದು ಧರ್ಮದ ಬಗ್ಗೆ ಅಹೇಳನಕಾರಿ ಬೋಧನೆ ಮಾಡಿದ ಶಿಕ್ಷಕಿ ವಿರುದ್ದ ಪ್ರತಿಭಟನೆ!

ಮಂಗಳೂರು : ಶಾಲಾ ಮಕ್ಕಳಿಗೆ ಬೋಧನೆ ಮಾಡುವ ವೇಳೆ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಶಿಕ್ಷಕಿಯ ವಿರುದ್ದ ಹಿಂದುಪರ ಸಂಘಟನೆಗಳು ಶಾಲೆಗೆ ಮುತ್ತಿಗೆ ಹಾಕಿರುವ ಘಟನೆ ಮಂಗಳೂರಿನ ಸಂತ ಜೆರೋಸಾ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲೆಯಲ್ಲಿ ಏಳನೇ ತರಗತಿ ಮಕ್ಕಳಿಗೆ ಬೊಧನೆ ಮಾಡುವ ವೇಳೆ ವರ್ಕ್ ಈಸ್ ವರ್ಶಿಪ್ ಎನ್ನುವ ಹೆಸರಿನ ಪಠ್ಯ ವಿಚಾರದಲ್ಲಿ ರಾಮ ಎಂಬುದು ಕಾಲ್ಪನಿಕ, ಮಸೀದಿ ಒಡೆದು ಮಂದಿರ ಮಾಡಬೇಕಿತ್ತಾ? ರಾಮಾಯಣವನ್ನು ವಾಲ್ಮೀಕಿ ಬರೆದಿದ್ದು ಎನ್ನುವುದಕ್ಕೆ ಯಾವ ಆಧಾರವಿದೆಯಾ? ಗಣಪತಿ, ರಾಮ ಎಲ್ಲವು ಕಾಲ್ಪನಿಕ ಹಿಂದು ಧರ್ಮಕ್ಕೆ ಬುನಾದಿಯೇ ಇಲ್ಲ ಎಂದು ಶಾಲಾ ಶಿಕ್ಷಕಿ ಬೋಧನೆ ಮಾಡಿರುವ ಆರೋಪವನ್ನ ಮಾಡಲಾಗಿದೆ.

ಇದನ್ನೂ ಓದಿ: ಡಿ.ಕೆ.ಸುರೇಶ್ ಹೇಳಿಕೆ ನಾವು ಸಮರ್ಥನೆ ಮಾಡಲ್ಲ: ಸಚಿವ ಕೆ.ಎನ್ ರಾಜಣ್ಣ

ಈ  ವಿಚಾರ ತಿಳಿದ ಹಿಂದುಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಶಾಲಾ ಶಿಕ್ಷಕಿ ಹಾಗು ಶಾಲೆಯ ವಿರುದ್ದ ಪ್ರತಿಭಟಿಸಿದ್ದಾರೆ. ಶಾಲಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ಆಗಮಿಸಿದ್ದು ಈ ವೇಳೆ ಡಿಸೋಜ ವಿರುದ್ದವು ಹಿಂದುಪರ ಸಂಘಟನೆಗಳು ಧಿಕ್ಕಾರ ಕೂಗಿದ್ದಾರೆ.  ಶಿಕ್ಷಕಿಯ ಈ ರೀತಿ ಅವಹೇಳನಕಾರಿ ಹೇಳಿಕೆನ್ನು ಪೋಷಕರು ವಿರೋಧಿಸಿದ್ದು ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Exit mobile version