Site icon PowerTV

ಜ್ಞಾನವಾಪಿ ಬಿಟ್ಟುಕೊಡಲ್ಲ, ಜೈಲಿಗೆ ಹೋಗಲು, ಲಾಠಿಯೇಟು ತಿನ್ನಲು ಸಿದ್ಧರಾಗಿ : ಅಬ್ದುಲ್ ಮಜೀದ್

ಮಂಗಳೂರು : ಜ್ಞಾನವಾಪಿ ಮಸೀದಿ ಯಾವುದೇ ಕಾರಣಕ್ಕೆ ಬಿಟ್ಟುಕೊಡಲ್ಲ. ದೇಶದಲ್ಲಿ ಸಂಘರ್ಷಕ್ಕೆ ತಯಾರಾಗಿ ಎಂದು ಎಸ್​ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಚೋದನಕಾರಿ ಹೇಳಿಕೆ ಮನೀಡಿದ್ದಾರೆ.

ಜ್ಞಾನವಾಪಿ ಮಸೀದಿ ಕುರಿತ ತೀರ್ಪು ಖಂಡಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜೈಲಿಗೆ ಹೋಗಲು, ಲಾಠಿಯೇಟು ತಿನ್ನಲು, ಹುತಾತ್ಮರಾಗಲು ತಯಾರಾಗಿ ಎಂದು ಕೆರೆ ಕೊಟ್ಟಿದ್ದಾರೆ.

ಸಂಘರ್ಷ, ತ್ಯಾಗ, ಬಲಿದಾನಗಳಿಗೆ ಸಿದ್ಧರಾಗಿ

ನಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯಲು, ಜೈಲಿಗೆ ಹೋಗಲು, ಲಾಠಿಯೇಟು ತಿನ್ನಲು, ಹುತಾತ್ಮರಾಗಲು ತಯಾರಾಗಬೇಕು. ಸಂಘರ್ಷ, ತ್ಯಾಗ, ಬಲಿದಾನಗಳಿಗೆ ಸಿದ್ಧರಾಗದಿದ್ದರೆ ನಮ್ಮ ಹಕ್ಕುಗಳು ನಮಗೆ ದೊರಕಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಪಾಕಿಸ್ತಾನವನ್ನು ದ್ವೇಷಿಸುವುದು ನನ್ನ ರಕ್ತದಲ್ಲೇ ಇದೆ, ‘ಜೈ ಶ್ರೀರಾಮ್’ ಎಂದರೆ ತಪ್ಪೇನು? : ಮೊಹಮ್ಮದ್ ಶಮಿ 

ಸಮುದಾಯಕ್ಕಾಗಿ ಜೀವ ಕೊಡಲು ತಯಾರಾಗಿ

ಕಾಂಗ್ರೆಸ್ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸುವುದು ಸಾಧ್ಯವಿಲ್ಲ. ಆದ್ದರಿಂದ ನಾವು ಬೀದಿಗಿಳಿದು ಹೋರಾಡಲೇ ಬೇಕು, ಜೀವ ಕೊಡಲೇಬೇಕು. ನಾವು ಸಾಯೋದು ಖಚಿತ, ಸಮುದಾಯಕ್ಕಾಗಿ ಜೀವ ಕೊಡಲು ತಯಾರಾಗಿ ಎಂದು ಕಾರ್ಯಕರ್ತರಿಗೆ ಅಬ್ದುಲ್ ಮಜೀದ್ ಕರೆ ನೀಡಿದ್ದಾರೆ.

Exit mobile version