Site icon PowerTV

PTM ಬ್ಯಾಂಕ್‌ ವಿರುದ್ಧ ಏಕಾಏಕಿ ಕ್ರಮಕೈಗೊಂಡಿಲ್ಲ: ಆರ್‌ಬಿಐ

ನವದೆಹಲಿ: ‘ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಏಕಾಏಕಿ ನಾವು ಕ್ರಮಕೈಗೊಂಡಿಲ್ಲ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ಜೆ. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,’ಪೇಟಿಎಂ ಪೇಮೆಂಟ್ ಬ್ಯಾಂಕ್ ವಿರುದ್ಧ ಏಕಾಏಕಿ ಕ್ರಮಕೈಗೊಂಡಿಲ್ಲ. ನಿಯಮಾವಳಿಗಳ ಪಾಲನೆಯಲ್ಲಿ ಎಸಗಿರುವ ಲೋಪ ಸರಿಪಡಿಸಿಕೊಳ್ಳಲು ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ನಿರ್ಲಕ್ಷ್ಯವಹಿಸಿದ್ದರಿಂದ ನಿರ್ಬಂಧ ಹೇರಲಾಗಿದೆ. ಇದು ‘ಗ್ರಾಹಕರ ರಕ್ಷಣೆಯ ದೃಷ್ಟಿಯಿಂದ ಇಂತಹ ಕ್ರಮ ಅನಿವಾರ್ಯ’ ಎಂದರು.

ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡಿ, ‘ಪೇಟಿಎಂ ಪೇಮೆಂಟ್ ಬ್ಯಾಂಕ್ ಮೇಲಷ್ಟೇ ನಿರ್ಬಂಧ ಹೇರಲಾಗಿದೆ. ಈ ಬಗ್ಗೆ ನಾಗರಿಕರಿಂದ ಸಾಕಷ್ಟು ಪ್ರಶ್ನೆಗಳನ್ನು ಸ್ವೀಕರಿಸಿದ್ದೇವೆ. ಮುಂದಿನ ವಾರ ಗ್ರಾಹಕರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಲಾಗುವುದು’ ಎಂದು ತಿಳಿಸಿದರು.

ಇದನ್ನೂ ಓದಿ: ಇಂದು ಮಂಡ್ಯ ಬಂದ್; ಕೆರಗೋಡಿನಿಂದ ಮಂಡ್ಯದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಬೈಕ್ ರ್ಯಾಲಿ

ಶೀಘ್ರವೇ, ಆಫ್‌ಲೈನ್‌ನಲ್ಲಿಯೂ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಗೆ ಚಾಲನೆ ನೀಡಲಾಗುವುದು ಎಂದು ದಾಸ್ ತಿಳಿಸಿದರು. 2022ರ ಡಿಸೆಂಬರ್‌ನಲ್ಲಿ ಚಿಲ್ಲರೆ ವಹಿವಾಟುಗಳಿಗೆ ಸಂಬಂಧಿಸಿದಂತೆ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಬಳಕೆಗೆ ಆರ್‌ಬಿಐ ಚಾಲನೆ ನೀಡಿದೆ.

 

Exit mobile version