Site icon PowerTV

ಜಡೇಜಾ ಕುಟುಂಬದಲ್ಲಿ ಬಿರುಕು : ಸೊಸೆ ವಿರುದ್ಧ ಜಡ್ಡು ತಂದೆ ಸ್ಫೋಟಕ ಹೇಳಿಕೆ

ಬೆಂಗಳೂರು : ಪುತ್ರ ರವೀಂದ್ರ ಜಡೇಜಾ ಹಾಗೂ ಸೊಸೆಯ ವಿರುದ್ಧ ತಂದೆ ಅನಿರುದ್ಧ್ ಸಿಂಗ್ ಗಂಭಿರ ಆರೋಪ ಮಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮದುವೆಯಾದ ಬಳಿಕ ರವೀಂದ್ರ ಜಡೇಜಾ ನಮ್ಮನ್ನು ತೊರೆದು ಆತನ ಪತ್ನಿಯ ಹಿಂದೆ ಹೋಗಿದ್ದಾನೆ. ಹೀಗಾಗಿ, ರವೀಂದ್ರ ಜಡೇಜಾ ಮತ್ತು ಸೊಸೆ ರಿವಾಬಾ ಜಡೇಜಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಅನಿರುದ್ಧ್ ಸಿಂಗ್, ನನ್ನ ಮಗ ಜಡೇಜಾ ಮದುವೆಯಾದ ಕೆಲವು ತಿಂಗಳಲ್ಲೇ ನಮ್ಮಿಂದ ದೂರವಾಗಿದ್ದಾನೆ. ಇದಕ್ಕೆ ಕಾರಣ ಅವನ ಪತ್ನಿ ರಿವಾಬಾ ಜಡೇಜಾ. ಆಕೆ ಎಲ್ಲವೂ ತನ್ನದಾಗಬೇಕು ಎಂಬ ಹಠಕ್ಕೆ ಬಿದ್ದು ಆತನನ್ನು ನಮ್ಮಿಂದ ದೂರ ಆಗುವಂತೆ ಮಾಡಿದಳು ಎಂದು ಆರೋಪಿಸಿದ್ದಾರೆ.

ಮೊಮ್ಮಗಳ ಮುಖವನ್ನೇ ನೋಡಿಲ್ಲ

ನಾನು ಈ ವಿಚಾರವನ್ನು ಹೇಳುವಾಗ ಕೆಲವರು ನನಗೆ ಹಣದ ಅಗತ್ಯವಿದೆ ಎಂದು ಭಾವಿಸಬಹುದು. ನಮ್ಮ ನಡುವೆ ಯಾವುದೇ ಸಂಬಂಧವಿಲ್ಲ. 5 ವರ್ಷಗಳಿಂದ ಮೊಮ್ಮಗಳ ಮುಖವನ್ನೇ ನೋಡಿಲ್ಲ ಎಂದು ಜಡೇಜಾ ತಂದೆ ಕಣ್ಣೀರು ಹಾಕಿದ್ದಾರೆ.

Exit mobile version