Site icon PowerTV

ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಸೇರಿ ಮತ್ತಿಬ್ಬರಿಗೆ ಭಾರತ ರತ್ನ ಘೋಷಣೆ!

ನವದೆಹಲಿ: ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್​, ಚೌಧರಿ ಚರಂಣ್ ಸಿಂಗ್​  ಹಾಗು ಹಸಿರುವ ಕ್ರಾಂತಿಯ ಪಿತಾಮಹ ಎಂ.ಎಸ್​ ಸ್ವಾಮಿನಾಥನ್​ ಅವರಿಗೆ ಭಾರತ ಸರ್ಕಾರವು ಭಾರತ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ, ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್, ಚರಣ್​ ಸಿಂಗ್ ಚೌದರಿ ಹಾಗು ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥನ್​ ಅವರ ಭಾರತಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಮನಗಂಡು ದೇಶದ ಅತ್ಯನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಪುರಸ್ಕಾರವನ್ನು ನೀಡಲು ತೀರ್ಮಾನಿಸಿದೆ.

ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ!?

ಇನ್ನು ಇದಕ್ಕೂ ಮುನ್ನ 2023-24ನೇ ಸಾಲಿನಲ್ಲಿ ಬಿಹಾರದ ಖ್ಯಾತ ಸಮಾಜವಾದಿ ನಾಯಕ ಹಾಗು ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್​ ಅವರಿಗೆ ಮರಣೋತ್ತರವಾಗಿ ಇದೇ ಜ.23 ರಂದು ಭಾರತ ರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು. ಬಳಿಕ ದೇಶದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರಿಗೂ ಭಾರತ ರತ್ನವನ್ನು ಘೋಷಣೆ ಮಾಡಲಾಯಿತು. ಇದೀಗ ಮತ್ತೆ ಮೂವರು ನಾಯಕರಿಗೆ ಭಾರತ ಸರ್ಕಾರ ಭಾರತ ರತ್ನವನ್ನು ಘೋಷಿಸಿದೆ.

Exit mobile version