Site icon PowerTV

ಅಯೋಧ್ಯೆ ಬಾಲರಾಮನ ದರ್ಶನ ಪಡೆದ ನಟ ಅಮಿತಾಬ್ ಬಚ್ಚನ್

ಅಯೋಧ್ಯೆ : ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಅಯೋಧ್ಯೆಗೆ ಭೇಟಿ ನೀಡಿ, ಬಾಲರಾಮ ದೇವರ ದರ್ಶನ ಪಡೆಡಿದ್ದಾರೆ.

ಬಿಗ್ ಬಿ ಅಯೋಧ್ಯೆಗೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈಗಾಗಲೇ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಿದ ರಾಮಮಂದಿರದಲ್ಲಿ ರಾಮಲಲ್ಲಾ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದಾರೆ.

ಇದೀಗ ಅಮಿತಾಭ್ ಬಚ್ಚನ್, ಬಾಲರಾಮ ದೇವರ ದರ್ಶನ ಪಡೆದಿದ್ದಾರೆ. ಸಿಐಎಸ್‌ಎಫ್ ಬಿಗಿ ಭದ್ರತೆಯಲ್ಲಿ ಆಗಮಿಸಿದ್ದ, ಅವರು ಗರ್ಭಗುಡಿ ಮುಂಭಾಗದಲ್ಲಿ ನಿಂತು ರಾಮಲಲ್ಲಾನ ದರ್ಶನ ಪಡೆದರು. ರಾಮ ಮಂದಿರದಲ್ಲಿ ಬಿಗ್‌ ಬಿ ಧ್ಯಾನ ಮಾಡಿ, ವಾಸ್ತುಶಿಲ್ಪವನ್ನು ಕಣ್ತುಂಬಿಕೊಂಡರು.

Exit mobile version