Site icon PowerTV

ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ​ ಅಕ್ರಮವಾಗಿ ಮಾರಟ ಮಾಡಿದ ಶಿಕ್ಷಕ ಅಮಾನತು!

ಯಾದಗಿರಿ: ಶಾಲಾ ಮಕ್ಕಳ ಪೌಷ್ಟಿಕತೆಗೆ ಪೂರಕವಾಗಿ ಸರ್ಕಾರ ಕಲ್ಪಿಸಿರುವ ಕ್ಷೀರಭಾಗ್ಯ ಯೋಜನೆಯಡಿಯ ಹಾಲಿನ ಪೌಡರ್ ಪ್ಯಾಕೇಟ್​ ಗಳನ್ನು ಶಾಲಾ ಮುಖ್ಯ ಶಿಕ್ಷಕ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಗ್ಗೆ ಪವರ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಮುಖ್ಯಶಿಕ್ಷಕನನ್ನು ಅಮಾನತು ಮಾಡಿದೆ ಆದೇಶಿಸಿದೆ. ​

ಯಾದಗಿರಿಯ ಲಿಂಗೇರಿ ತಾಂಡಾದ ಮುಖ್ಯ ಶಿಕ್ಷಕ ಸೂರ್ಯಕಾಂತ್ ಅಮಾನತ್ತಾದ ವ್ಯಕ್ತಿ. ಯಾದಗಿರಿ ಡಿಡಿಪಿಐ ಮಂಜುನಾಥ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಅಮಾನತ್ತು ಮಾಡುವ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕಚೇರಿಗೆ ಮಸಿ ಬಳಿದು ಆಕ್ರೋಶ!

ಯಾದಗಿರಿ ನಗರದ ಕಿರಾಣಿ ಅಂಗಡಿಯೊಂದರಲ್ಲಿ ಹಾಲಿನ ಪ್ಯಾಕೇಟ್ ಮಾರಿದ್ದ ಶಿಕ್ಷಕ ಸೂರ್ಯಕಾಂತ್
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಕ್ಷರ ದಾಸೋಹ ಯೋಜನಾಧಿಕಾರಿಗಳಿಗೆ ಸೂಚನೆ ಸೂಚನೆ ನೀಡಿದ್ದಾರೆ.

Exit mobile version