Site icon PowerTV

ಶ್ವೇತ ಪತ್ರ ಕೇವಲ ಪೋಸ್ಟ್ ಮಾರ್ಟಮ್ ರಿಪೋರ್ಟ್ : ಡಿ.ಕೆ. ಸುರೇಶ್

ನವದೆಹಲಿ : ಮನಮೋಹನ್ ಸಿಂಗ್ ಸದೃಢ ಆರ್ಥಿಕ ಪರಿಸ್ಥಿತಿ ನಿಭಾಯಿಸಿದ್ದರು. ಹಾಗಾಗಿ, ಭಾರತ ಆರ್ಥಿಕವಾಗಿ ಸದೃಢವಾಗಿದೆ. ಇವತ್ತಿನ ಶ್ವೇತ ಪತ್ರ ಕೇವಲ ಪೋಸ್ಟ್ ಮಾರ್ಟಮ್ ರಿಪೋರ್ಟ್ ಅಷ್ಟೇ ಎಂದು ಸಂಸದ ಡಿ.ಕೆ. ಸುರೇಶ್ ಕುಟುಕಿದರು.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯುಪಿಎ ಸರ್ಕಾರದ 10 ವರ್ಷ ಆಯ್ತು. ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಆರ್ಥಿಕ ವ್ಯವಸ್ಥೆ ಬಹಳ ವ್ಯತ್ಯಾಸ ಇದೆ ಎಂದು ಚಾಟಿ ಬೀಸಿದರು.

ನಿರ್ಮಲ ಸೀತಾರಾಮನ್ ದಾಖಲೆ ಕೊಟ್ಟಿರುವ ವಿಚಾರವಾಗಿ ಮಾತನಾಡಿ, ಈಗ ಅವರ ತಪ್ಪು ಮರೆ ಮಾಚಲು ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಸಿಎಂ ಸಿದ್ದರಾಮಯ್ಯ ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ. ಕಳೆದ ಹಣವನ್ನು ಈ ವರ್ಷ ಕೊಟ್ಟು, ಈ ವರ್ಷದ ಹಣವನ್ನು ಮುಂದೆ ಕೊಡುವುದು ಸರಿಯಲ್ಲ ಎಂದು ಹೇಳಿದರು.

ನಮ್ಮ ದಾಖಲೆಗಳನ್ನು ಅವರು ತಿರುಚಿದ್ದಾರೆ

ನಿರ್ಮಲ ಸೀತಾರಾಮನ್ ನೀಡಿರುವ ದಾಖಲೆ ಕಳೆದ ಸಾಲಿನದ್ದು. ಬರ ಎದುರಾಗಿದ್ದು 2023-24 ರ ಸಾಲಿನದ್ದು. ನಮ್ಮ ಸರ್ಕಾರ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. ನಮ್ಮ ದಾಖಲೆಗಳನ್ನು ಅವರು ತಿರುಚಿದ್ದಾರೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹಣಕಾಸಿಣ ಪತ್ರ ವೆಬ್​ನಲ್ಲೂ ಲಭ್ಯ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

Exit mobile version