Site icon PowerTV

ನಾನು ಪಾರ್ಲಿಮೆಂಟ್‌ ಸದಸ್ಯತ್ವ ಕೇಳಿದ್ದೀನಿ: ವಿ ಸೋಮಣ್ಣ

ಬೆಂಗಳೂರು: ನಾನು ಪಾರ್ಲಿಮೆಂಟ್‌ ಸದಸ್ಯತ್ವ ಕೇಳಿದ್ದೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ತುಮಕೂರು ಕ್ಷೇತ್ರದ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ತುಮಕೂರು ಅಭಿವೃದ್ಧಿಗಾಗಿ ನಾನು ಶ್ರಮವಹಿಸಿದ್ದೇನೆ. ನಾನು ಯಾವುದೇ ಕ್ಷೇತ್ರವನ್ನು ಕೇಳಿಲ್ಲ ಎಂದು ಹೇಳಿದರು.

ಕಳೆದ ಬಾರಿ ನನಗೆ ಸೋಲಾಗಿದೆ. ಆದರೆ ನನ್ನ ಕಾರ್ಯವೈಖರಿ ನೋಡಿ ಹೈಕಮಂಡ್ ಯಾವ ಕ್ಷೇತ್ರ ನೀಡಿದರೂ ನನಗೆ ತೊಂದರೆಯಿಲ್ಲ. ವರಿಷ್ಠರ ಆದೇಶವನ್ನು ನಾನು ಮೀರುವುದಿಲ್ಲ. ಆದರೆ ಪಾರ್ಲಿಮೆಂಟ್ ಸದಸ್ಯತ್ವ ಕೇಳಿದ್ದೇನೆ. ರಾಜೀವ್ ಚಂದ್ರಶೇಖರ್ ಅವರಿಗೆ ಪಾರ್ಲಿಮೆಂಟ್‌ ಸದಸ್ಯತ್ವ ಕೊಡದಿದ್ದರೆ ನನಗೆ ಕೊಡಿ ಎಂದಿದ್ದೇನೆ ಎಂದರು.

ನಾನು ತುಮಕೂರಿನಲ್ಲಿ ಕೆಲಸ ಮಾಡಿರುವುದನ್ನು ನೋಡಿ ನನ್ನ ಹೆಸರು ಕೇಳಿ ಬರುತ್ತಿದೆ. ತುಮಕೂರಿನಲ್ಲಿ ಜೆ.ಸಿ.ಮಾಧುಸ್ವಾಮಿ ಅವರು ಆಕಾಂಕ್ಷಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ನನ್ನ ವಿರೋಧವಿಲ್ಲ ಎಂದು ಸೋಮಣ್ಣ ಹೇಳಿದರು.

Exit mobile version